ದೇಶದಲ್ಲಿ ಕೋವಿಡ್-19 ಸೋಂಕು ಪತ್ತೆಗಾಗಿ ಒಟ್ಟು 3 ಕೋಟಿಗೂ ಅಧಿಕ ಪರೀಕ್ಷೆ…
ನವದೆಹಲಿ: ದೇಶದಲ್ಲಿ ಕೋವಿಡ್-19 ಸೋಂಕು ಪತ್ತೆಗಾಗಿ ಒಟ್ಟು 3 ಕೋಟಿಗೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಆದಿತ್ಯವಾರದ 7 ಲಕ್ಷದ 31 ಸಾವಿರದ 697 ಪರೀಕ್ಷೆ ಸೇರಿದಂತೆ ಆಗಸ್ಟ್ 16ರವರೆಗೂ 3,00,14, 400 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 7,31,697 ಪರೀಕ್ಷೆಗಳನ್ನು ನಡೆಸಲಾಗಿದ್ದು, ಪ್ರತಿದಿನ ಪರೀಕ್ಷೆ ಸಾಮರ್ಥ್ಯವನ್ನು 10ಕ್ಕೆ ಏರಿಸಲಾಗಿದ್ದು, ಅತ್ಯುತ್ತಮ ಸಾಧನೆ ಮಾಡಲಾಗಿದೆ.ಜುಲೈ 14ರಿಂದ 1.2 ಕೋಟಿಯಲ್ಲಿದ್ದ ಪರೀಕ್ಷೆ ಸಂಖ್ಯೆ ಆಗಸ್ಟ್ 16ರವರೆಗೆ ಮೂರು ಕೋಟಿ ಆಗಿದೆ. ಇದೇ ಅವಧಿಯಲ್ಲಿ ಪಾಸಿಟಿವ್ ದರ ಶೇ. 7. 5 ರಿಂದ 8.81ಕ್ಕೆ ಏರಿಕೆಯಾಗಿದ್ದು, ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.