ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು- ಬೈಂದೂರು ಉತ್ಸವದಲ್ಲಿ ಪ್ರಾಜೆಕ್ಟ್ ಪ್ರದರ್ಶನ…
ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಎಂಸಿಎ ವಿಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ ಬೈಂದೂರಿನಲ್ಲಿ ನಡೆದ ಬೈಂದೂರು ಉತ್ಸವ-2026 ರಲ್ಲಿ ಆಯೋಜಿಸಲಾದ ಪ್ರಾಜೆಕ್ಟ್ ಎಕ್ಸ್ಪೋ ದಲ್ಲಿ ಸಾಮಾಜಿಕ ಕಳಕಳಿಯುಳ್ಳ ನವೀನ ರೀತಿಯ ಐಒಟಿ ತಂತ್ರಜ್ಞಾನದ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಿ ಅಪಾರ ಜನಮನ್ನಣೆಯನ್ನು ಗಳಿಸಿಕೊಂಡಿದ್ದಾರೆ.
ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ಆರೋಗ್ಯ ಮೇಲ್ವಿಚಾರಣೆಯ ವ್ಯವಸ್ಥೆ ಸೇಫ್‍ಬಡಿ, ಅಣಬೆಯ ಬೆಳವಣಿಗೆ ಮತ್ತು ಅದರ ಮೇಲ್ವಿಚಾರಣೆಯ ಸ್ವಯಂಚಾಲಿತ ವ್ಯವಸ್ಥೆ ಸ್ಮಾರ್ಟ್ ಮಶ್ರೂಮ್, ಐಒಟಿ ಅಧಾರಿತ ಪಾದಚಲನೆಯ ವಿದ್ಯುತ್ ಉತ್ಪಾದನೆ ಮತ್ತು ಅದರ ಬಳಕೆಯ ಯೋಜನೆ ಸ್ಮಾಟ್ರ್ಸ್‍ಸ್ಟೆಪ್, ಐಒಟಿ ಆಧಾರಿತ ಸ್ಥಳೀಯ ಬಸ್ಸುಗಳ ಆಗಮನ-ನಿರ್ಗಮನದ ಮೇಲ್ವಿಚಾರಣಾ ವ್ಯವಸ್ಥೆ, ನೈಜ ಸಂಚಾರ ವ್ಯವಸ್ಥೆಯ ಆದ್ಯತೆಯೊಂದಿಗೆ ಆಸ್ಪತ್ರೆ ಸಂಯೋಜಿತ ಆಂಬುಲೆನ್ಸ್ ವ್ಯವಸ್ಥೆ ಸ್ಮಾರ್ಟ್ ಆಂಬುಲೆನ್ಸ್, ಐಒಟಿ ಆಧಾರಿತ ಪಶುಪಾಲನಾ ಫಾರ್ಮ್ ನಿರ್ವಹಣಾ ವ್ಯವಸ್ಥೆ ಸ್ಮಾರ್ಟ್ ಕ್ಯಾಟಲ್ ಹೀಗೆ ರೈತರಿಗೆ ಅನುಕೂಲವಾಗುವ ಮತ್ತು ಸಮಾಜಮುಖೀ ಯೋಜನೆಗಳನ್ನು ಅಲ್ಲಿ ಪ್ರದರ್ಶಿಸಿದರು.
ಯೋಜನೆಗಳ ಸಾಮಾಜಿಕ ಉಪಯುಕ್ತತೆ, ನವೀನ ತಂತ್ರಜ್ಞಾನದ ಅಳವಡಿಕೆ, ಶಿಸ್ತುಬದ್ದ ನಡವಳಿಕೆ ಹಾಗೂ ಅತ್ಯುತ್ತಮ ಪ್ರಸ್ತುತಿಗೆ ವೀಕ್ಷಕರು ಮತ್ತು ಗಣ್ಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳಿ ಹಾಗೂ ಉಡುಪಿ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ವಿದ್ಯಾರ್ಥಿಗಳನ್ನು ಗೌರವಿಸಿದರು.
ಎಂಸಿಎ ವಿಭಾಗದ ನಿರ್ದೇಶಕಿ ಡಾ. ಜ್ಯೋತಿಮಣಿ.ಕೆ ಅವರ ನಿರ್ದೇಶನದಂತೆ ವಿದ್ಯಾರ್ಥಿಗಳಾದ ಹವ್ಯಾಸ್.ಬಿ, ಸೃಜನ್ ಕುಮಾರ್.ಬಿ, ರಕ್ಷಿತ್.ಬಿ, ಕಾರ್ತಿಕ್ ನಾಯಕ್, ರಚನ್.ಪಿ.ಎಂ ಮತ್ತು ದೀಕ್ಷಾ ಇದನ್ನು ನಿರ್ಮಿಸಿ ಪ್ರಸ್ತುತಪಡಿಸಿದ್ದಾರೆ. ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ರಾಜೇಶ್ವರಿ.ಎಂ, ಪ್ರೊ.ಅನಿರುದ್ಧ್.ಬಿ.ಜಿ, ಪ್ರೊ.ಅನಿಲ್ ಕುಮಾರ್.ಕೆ ಮತ್ತು ಪ್ರೊ.ಪೂಜಾಲಕ್ಷ್ಮಿ ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ತಿಳಿಸಿದ್ದಾರೆ.





