ಕುಣಿಯುತ್ತ ಹೋಗುವೆ…

ಕುಣಿಯುತ್ತ ಹೋಗುವೆ...
ಕುಣಿದು ಕುಣಿದು ಹೊರಟೆ
ನಾನು ನನ್ನ ಶಾಲೆಗೆ
ಸ್ಲೇಟು ಪೆನ್ನು ಚೀಲ ಹಿಡಿದು
ನಡೆದೆ ಶಾಲೆಗೆ
ಬೆಟ್ಟ ಹತ್ತಿ ನದಿಯ ದಾಟಿ
ಆಟವಾಡುತಾ
ಚಿಟ್ಟೆ ಹಿಂದೆ ಓಡಿ ಹೋಗಿ
ಏಟು ತಿಂದೇನೆ
ಗಂಟೆ ಹೊಡೆವ ಸಮಯ ಮೊದಲೆ
ಶಾಲೆ ಸೇರುವೆ
ಗುರುಗಳಿಗೆ ಭಕ್ತಿಯಿಂದ
ಕರವ ಮುಗಿಯುವೆ
ಪಾಠವನ್ನು ಚಂದ ಓದಿ
ವಿಷಯ ಕಲಿಯುವೆ
ಗೆಳೆಯರೊಡನೆ ಕೂಡಿ
ಶಾಲೆ ಸ್ವಚ್ಛ ಮಾಡುವೆ
ಗಿಡವ ನೆಟ್ಟು ನೀರು ಹಾಕಿ
ತೋಟ ಮಾಡುವೆ
ಹಸಿರಿನಿಂದ ಉಸಿರು ಪಡುವ
ಕೆಲಸ ಮಾಡುವೆ
ಮನೆಗೆ ಬಂದು ಕಾಲು ತೊಳೆದು
ತಿಂಡಿ ತಿನ್ನುವೆ
ಬರೆವ ಕೆಲಸ ಮುಗಿಸಿ ಬೇಗ
ನಿದ್ದೆ ಮಾಡುವೆ
ಡಾ. ವೀಣಾ ಎನ್ ಸುಳ್ಯ