ವಿಭಜಿತ ನಿವೇಶನ ಕಟ್ಟಡ ಮತ್ತು ಫ್ಲಾಟ್ ಗಳಿಗೆ ನಗರ ಪ್ರಾಧಿಕಾರಗಳಿಂದ ವಿನ್ಯಾಸ ಅನುಮೋದನೆಯೊಂದಿಗೆ ಎ ಖಾತೆ ನೀಡಲು ಸರ್ಕಾರ ಹಸಿರು ನಿಶಾನೆ-ಕೆ.ಎಂ. ಮುಸ್ತಫ…

ಸುಳ್ಯ:ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ಇರುವ ನಿವೇಶನ, ಕಟ್ಟಡ, ಫ್ಲಾಟ್ ಗಳು ವಿಭಜನೆಗೆ ಅವಕಾಶವಿಲ್ಲದೆ ಕ್ರಯ ಪತ್ರ, ಫಾರಂ 3,ಕಟ್ಟಡ ಪರವಾನಿಗೆ ಪಡೆಯಲು ಸಾಧ್ಯವಾಗದೆ ಜನ ಸಾಮಾನ್ಯರು ಸಮಸ್ಯೆಯಲ್ಲಿದ್ದರು. ಇದನ್ನು ಮನಗೊಂಡ ಸರ್ಕಾರವು ಈ ಬಗ್ಗೆ ನಿಯಮಗಳನ್ನು ಸರಳೀಕರಣಗೊಳಿಸಿದ್ದು, ಹಲವಾರು ವರ್ಷಗಳ ಬೇಡಿಕೆಗೆ ಮನ್ನಣೆ ಸಿಕ್ಕಿದೆ ಎಂದು ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ.ಮುಸ್ತಫ ರವರು ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿರುತ್ತಾರೆ.
ಜ. 28 ರಂದು ಸುಳ್ಯ ನಗರ ಪ್ರಾಧಿಕಾರ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ದ. ಕ. ಹಾಗೂ ಉಡುಪಿ ಜಿಲ್ಲೆಗಳ ಎಲ್ಲಾ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರು ಸಭೆ ಸೇರಿ ಒಕ್ಕೂಟ ರಚಿಸಿ ಸಮಸ್ಯೆಗಳನ್ನು ಸಚಿವರುಗಳ ವಿಧಾನಸಭಾಧ್ಯಕ್ಷರ ಹಾಗೂ ಶಾಸಕರ,ಅಧಿಕಾರಿಗಳ ಗಮನಕ್ಕೆ ತಂದು ತುಂಡು ಭೂಮಿಗಳು ಹೆಚ್ಚಾಗಿರುವ ಕರಾವಳಿಗೆ ಪ್ರತ್ಯೇಕ ವಲಯ ನಿಯಮಾವಳಿ ರಚಿಸಬೇಕೆಂದು ಮನವಿಯನ್ನು ಸಲ್ಲಿಸಲಾಗಿತ್ತು.
ಈ ಬಗ್ಗೆ ಸ್ಪೀಕರ್ ಯು.ಟಿ ಖಾದರ್ ರವರು ಬೆಂಗಳೂರು ಮತ್ತು ಮಂಗಳೂರಿನಲ್ಲಿ ಸಚಿವರಗಳ ವಿಧಾನಸಭೆ ಮತ್ತು ವಿಧಾನ ಪರಿಷತ್ ಶಾಸಕರುಗಳ ಸಭೆ ನಡೆಸಿ ಸಮಸ್ಯೆ ಬಗ್ಗೆ ಮನದಟ್ಟು ಮಾಡಿರುವುದು ಕರಾವಳಿ ಜಿಲ್ಲೆಗಳಿಗೆ ತುಂಬಾ ಅನುಕೂಲವಾಗಿದೆ ಎಂದು ಮುಸ್ತಫ ತಿಳಿಸಿದರು.

ಈ ಯೋಜನೆಯಿಂದ ಸುಳ್ಯ ನಗರ ಪ್ರಾಧಿಕಾರ ವ್ಯಾಪ್ತಿಯಲ್ಲಿ ಸುಮಾರು 800 ಕ್ಕೂ ಮಿಕ್ಕಿ ಕುಟುಂಬಗಳು ಇದರ ಪ್ರಯೋಜನ ಪಡೆಯಲಿದ್ದು ಮುಂದೆ ಭೂಮಿ,ಮನೆ, ಕಟ್ಟಡ ಗಳಿಗೆ ಸಂಬಂದಿಸಿದoತೆ ವಿನ್ಯಾಸ ಅನುಮೋದನೆ, ಫಾರಂ 3,ಕಟ್ಟಡ ಪರವಾನಿಗೆ, ಮಾರಾಟ, ವಿಭಾಗ ಪತ್ರ, ಕಟ್ಟಡ ನಿರ್ಮಾಣ ಪರವಾನಿಗೆ ಕನ್ವರ್ಷನ್ ಮಾಡದೆ ಕಟ್ಟಡ ಕಟ್ಟಿದವರಿಗೆ ಭೂ ಪರಿವರ್ತನೆ ಮಾಡುವುದು ಸೇರಿದಂತೆ ಎಲ್ಲಾ ಕೆಲಸಗಳು ಸುಸೂತ್ರವಾಗಲಿದೆ ಎಂದು ಅವರು ತಿಳಿಸಿದರು. ಸುಳ್ಯ ನಗರ ಮಹಾಯೋಜನೆ ಜನರಿಗೆ ಅನುಕೂಲ ವಾಗುವ ರೀತಿಯಲ್ಲಿ ಪರಿಷ್ಕರಿಸಿ ಶೀಘ್ರದಲ್ಲೇ ಸರಕಾರಕ್ಕೆ ಸಲ್ಲಿಕೆ ಮಾಡಲಾಗುವುದು.
ನಗರ ಭೂ ಉಪಯೋಗಕ್ಕೆ ಸಂಬಂಧಿಸಿದಂತೆ ಮಹಾ ಯೋಜನೆ (ಮಾಸ್ಟರ್ ಪ್ಲಾನ್ )
ನಗರಾಭಿವೃದ್ಧಿ ಇಲಾಖೆಯಿಂದ ತಾತ್ಕಾಲಿಕ ಅನುಮೋದನೆ ಗೊಂಡಿದ್ದು ಈಗಾಗಲೇ ಸಲ್ಲಿಕೆಯಾಗಿರುವ ಆಕ್ಷೇಪಣೆ ಗಳಿಗೆ ಸಕಾರಾತ್ಮಕ ನಿರ್ಣಯ ಗಳನ್ನು ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗುವುದು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನಗರ ಪ್ರದೇಶಗಳಲ್ಲಿ ರಸ್ತೆ ಆಗಲೀಕರಣ ಸರಳ ಗೊಳಿಸಲು ನಮ್ಮ ಪ್ರದೇಶವನ್ನು ಹಿಲ್ ಏರಿಯಾ ಎಂದು ಪರಿಗಣಿಸಿರುವುದರಿಂದ ಆಗಲೀಕರಣ ಅಸಾಧ್ಯವಾದ ಸ್ಥಳಗಳಲ್ಲಿ 3.65 ಮೀಟರ್ ರಸ್ತೆಯನ್ನು ಪರಿಗಣಿಸಲಾಗುವುದು.
ಸರ್ಕಾರದಿಂದ ನೀಡಿದ ನಿವೇಶನ ಗಳಲ್ಲಿ ಹಾಲಿ ರಸ್ತೆಗಳನ್ನು ಪರಿಗಣಿಸುವುದು.
ಪ್ಲಾಂಟೇಷನ್ ಪ್ರದೇಶಗಳಲ್ಲಿ ಮಂಜೂರಾತಿಗೊಂಡ ಜಮೀನನ್ನು ಕೃಷಿ ವಲಯ ಎಂದು ಪರಿಗಣಿಸಿ ಅಗತ್ಯ ವಿರುವಲ್ಲಿ ವಲಯ ಬದಲಾವಣೆಗೆ ಸೂಚಿಸುವುದು ಸೇರಿದಂತೆ ಅನೇಕ ಉಪ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಕೃಷಿ ವಲಯದಲ್ಲಿ 10 ಸೆಂಟ್ಸ್ ವರೆಗೆ ಕನ್ವರ್ಷನ್ ಗೆ ಅನುಮತಿಸುವುದು ಸೇರಿದಂತೆ ಅನೇಕ ಜನ ಪರ ನಿರ್ದಾರ ಕೈಗೊಳ್ಲಾಗುತ್ತದೆ ಎಂದರು ಮಹಾ ಯೋಜನೆ ಅನುಮೋದನೆ ಗೊಂಡ ನಂತರ ವಸತಿ ವಲಯ ಗಳಿಗೆ ಕನ್ವರ್ಷನ್ ವಿನಾಯಿತಿ ಇರುತ್ತದೆ ಅಲ್ಲದೆ ಈ ಹಿಂದೆ 5 ವರ್ಷಗಳ ವರೆಗೆ ವಲಯ ಬದಲಾವಣೆ ಗೆ ಅವಕಾಶ ವಿರಲಿಲ್ಲ ಈಗ 1 ವರ್ಷದ ನಂತರ ಪ್ರಸ್ತಾವನೆ ಸಲ್ಲಿಸಬಹುದು.

ಕೆರೆ ಅಭಿವೃದ್ಧಿಗೆ ಲಭ್ಯ ವಿರುವ ಅನುದಾನವನ್ನು ಸುಳ್ಯ ವ್ಯಾಪ್ತಿಯ ಲ್ಲಿ ಕೆರೆಗಳು ಇಲ್ಲದೇ ಇರುವುದರಿಂದ ಸಾರ್ವಜನಿಕ ಬಾವಿಗಳನ್ನು ದುರಸ್ಥಿಗೊಳಿಸಲು ಸದ್ರಿ ಅನುದಾನ ಬಳಸಲು ಅನುಮತಿಗಾಗಿ ಸರ್ಕಾರಕ್ಕೆ ಬರೆಯಲಾಗುವುದು ಹಾಗೂ ಸುಳ್ಯದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಸೂಡ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ ಎಂದು ಅವರು ಹೇಳಿದರು.

whatsapp image 2026 01 28 at 7.17.39 pm

Related Articles

Back to top button