ನವೋದಯ ಯುವಕ ಸಂಘದ ೩೦ ನೇ ವಾರ್ಷಿಕೋತ್ಸವ….

ಬಂಟ್ವಾಳ: ಧಾರ್ಮಿಕ ಶೃದ್ದಾ ಭಕ್ತಿಯಿಂದ ತುಳುನಾಡಿನ ಸಕಲ ಸಂಸ್ಕ್ರತಿ ಉಳಿಸಲು ಸಾಧ್ಯವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಸಾಮರಸ್ಯ ಸಂಯೋಜಕ ಸುರೇಶ್ ಪರ್ಕಳ ಹೇಳಿದರು. ಅವರು ನವೋದಯ ಯುವಕ ಸಂಘದ ೩೦ ನೇ ವಾರ್ಷಿಕೋತ್ಸವದ ಅಂಗವಾಗಿ ಜರಗಿದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಬೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಜೊತೆಗೆ ಗುರು ಹಿರಿಯರಿಗೆ ಗೌರವ, ಮೂಲನಂಬಿಕೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಯುವ ಸಮುದಾಯ ಮುನ್ನಡೆಯಲು ಅವರು ಕರೆ ನೀಡಿದರು.
ಕಾಮಾಜೆಯ ನವೋದಯ ಸಂಘ, ಸಂಘಟನೆಯ ಜೊತೆಯಲ್ಲಿ ಧರ್ಮ ರಕ್ಷಣೆಯ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಮಾಡುತ್ತಿರುವದು ಶ್ಲಾಘನೀಯ ಕಾರ್ಯ ಎಂದು ಅವರು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಮಾಜಿ ಸೈನಿಕ, ಕೆನರಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಮುರಳೀಕೃಷ್ಣ ಸೋಮಯಾಜಿ ಅರ್ಬಿ ಮಾತನಾಡಿ, ಸರಕಾರ ಜಾರಿಗೆ ತರುವ ಎಲ್ಲಾ ಯೋಜನೆಗಳನ್ನು ಗ್ರಾಮೀಣ ಭಾಗದ ಪ್ರತಿಯೊಬ್ಬ ಫಲಾನುಭವಿಗಳಿಗೆ ಸಿಗುವಂತೆ ಮಾಡುವ ಜವಾಬ್ದಾರಿಯನ್ನು ಇಂತಹ ಸಂಘಟನೆಗಳು ಮಾಡಬೇಕಾಗಿದೆ ಎಂದು ಅವರು ಹೇಳಿದರು. ವೇದಿಕೆಯಲ್ಲಿ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಅಧ್ಯಕ್ಷ ರಾಜೇಶ್ ಎಲ್.ನಾಯಕ್, ಬಂಟ್ವಾಳ ಪುರಸಭಾ ಸದಸ್ಯೆ ಶೋಭಾ ಹರೀಶ್ಚಂದ್ರ ಉಪಸ್ಥಿತರಿದ್ದರು.
ಯುವ ಕವಿ ಯತೀಶ್ ಕಾಮಾಜೆ ಹಾಗೂ 10 ನೇ ತರಗತಿ ಕಲಿಕಯಲ್ಲಿ ಅಪೂರ್ವ ಸಾಧನೆ ಮಾಡಿದ ವಿದ್ಯಾರ್ಥಿನಿ ನಿಶ್ಮಿತಾ ಕುಲಾಲ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸ್ಥಳೀಯ ವಿಚಲಾಂಗ ೪ ಕುಟುಂಬಗಳಿಗೆ ಆರ್ಥಿಕ ಧನ ಸಹಾಯ ನೀಡಲಾಯಿತು. ಸಂಘದ ಅಧ್ಯಕ್ಷ ಭಾಸ್ಕರ ಟೈಲರ್‍ ಕಾಮಾಜೆ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕುಲಾಲ್ ಮೈರಾನದ ಪಾದೆ, ಜೊತೆ ಕಾರ್ಯದರ್ಶಿಗಳಾದ ವಿಜಯ ಮೈರಾನ್ ಪಾದೆ, ರಾಜೇಶ್ ಭಂಡಾರಿ ಮೈರಾನ್ ಪಾದೆ, ಕೋಶಾಧಿಕಾರಿ ವಿನೋದ್ ಕುಮಾರ್‍ ಕಾಮಾಜೆ ಉಪಸ್ಥಿತರಿದ್ದರು.ಸದಸ್ಯ ಬಾಲಕೃಷ್ಣ ಕಾಮಾಜೆ ಸ್ವಾಗತಿಸಿ, ಜಯಂತ್ ಕುಲಾಲ್ ಕಾಮಾಜೆ ವಂದಿಸಿದರು.
ಸಂಘದ ಉಪಾಧ್ಯಕ್ಷ ಉಮೇಶ್ ಮೈರಾನ್ ಪಾದೆ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.ರಾತ್ರಿ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ ಶ್ರೀ ದೇವಿ ಮಹಾತ್ಮೆ ನಡೆಯಿತು.

Sponsors

Related Articles

Leave a Reply

Your email address will not be published. Required fields are marked *

Back to top button