ಬಹುಮುಖ ಪ್ರತಿಭೆಯ ಸುಧಾ ನಾಗೇಶ್ ಅವರಿಗೆ ಒಲಿದು ಬಂದ ಉತ್ತಮ ಶಿಕ್ಷಕಿ ಪ್ರಶಸ್ತಿ…

ಬಂಟ್ವಾಳ: ಸುಧಾ ನಾಗೇಶ್ ಅವರು ಬಂಟ್ವಾಳ ತಾಲೂಕು ಉತ್ತಮ ಶಿಕ್ಷಕಿಯಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಸುಧಾ ನಾಗೇಶ್ ಇವರು ಶಾರದಾ ಪ್ರೌಢ ಶಾಲೆ ಪಾಣೆಮಂಗಳೂರಿನಲ್ಲಿ ಶಿಕ್ಷಕಿಯಾಗಿ ಕಳೆದ 29 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಡಲ ಮನೆ, ಹೃದಯರಾಗ ,ಹೀಗೆ ಸುಮ್ಮನೆ , ಜೀನಿಯಸ್, ಹೊಂಬೆಳಕು ಮೊದಲಾದ ಕೃತಿಗಳನ್ನು ಬರೆದು ಸಾಹಿತ್ಯ ಲೋಕದಲ್ಲಿ ಪರಿಚಿತರಾಗಿದ್ದಾರೆ. ಹಲವು ಕನ್ನಡ ಹಾಗೂ ತುಳು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಉತ್ತಮ ಗೈಡರ್ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ , ಚೈತನ್ಯಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಇವರನ್ನು ಗೌರವಿಸಲಾಗಿದೆ. ಕವಯಿತ್ರಿಯಾಗಿ, ನಿರೂಪಕಿಯಾಗಿ, ಅಂಕಣ ಬರಹಗಾರ್ತಿಯಾಗಿ, ಆಕಾಶವಾಣಿ ಕಲಾವಿದೆಯಾಗಿ, ನಟಿಯಾಗಿ ಗುರುತಿಸಲ್ಪಟ್ಟಿರುವ ಸುಧಾ ನಾಗೇಶ್ ಬಂಟ್ವಾಳ ತಾಲೂಕು ಉತ್ತಮ ಶಿಕ್ಷಕಿಯಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ.