ಪ್ರಗತಿ ಸ್ಟಡಿ ಸೆಂಟರ್ ನ ‘ಪ್ರೇರಣಾ’-2019 ಕಾರ್ಯಕ್ರಮಕ್ಕೆ ಗೈರಾದುದಕ್ಕೆ ರವಿ ಬೆಳಗೆರೆಯವರಿಂದ ಕಳವಳ ವ್ಯಕ್ತಪಡಿಕೆ…

ಪುತ್ತೂರು: ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್ (ರಿ). ಪುತ್ತೂರು ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ನ ಪ್ರಗತಿ ರೆಸಿಡೆನ್ಶಿಯಲ್ ಕ್ಯಾಂಪಸ್ ಪೋಳ್ಯದಲ್ಲಿ ನವೆಂಬರ್ 29 ಮತ್ತು 30ರಂದು ಸಂಸ್ಥೆಯ `ಪ್ರೇರಣಾ-ದ್ವಾದಶ ಹೆಜ್ಜೆ’ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಬೇಕಾಗಿದ್ದ ಹಿರಿಯ ಪತ್ರಕರ್ತ ಹಾಯ್ ಬೆಂಗಳೂರು ಪತ್ರಿಕೆಯ ಪ್ರಧಾನ ಸಂಪಾದಕ ರವಿ ಬೆಳೆಗೆರೆ ಅವರ ಕಚೇರಿಗೆ ಬುಧವಾರ ತೆರಳಿದ ಸಂಸ್ಥೆಯ ಸಂಚಾಲಕ ಗೋಕುಲ್‍ನಾಥ್ ಪಿ.ವಿ ಅವರು ವಾರ್ಷಿಕೋತ್ಸವದ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ, ‘ಪ್ರೇರಣಾ ನುಡಿ’ಗಾಗಿ ಹಿರಿಯ ಪತ್ರಕರ್ತ, ‘ಹಾಯ್ ಬೆಂಗಳೂರು’ ಪತ್ರಿಕೆಯ ಪ್ರಧಾನ ಸಂಪಾದಕ ರವಿ ಬೆಳಗೆರೆಯವರು ಆಗಮಿಸಬೇಕಾಗಿತ್ತು. ಅನಾರೋಗ್ಯದ ತುರ್ತು ಪರಿಸ್ಥಿತಿ ಹಿನ್ನೆಲೆಯಿಂದ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ನಿಮಿತ್ತ ಸ್ವತಃ ರವಿ ಬೆಳಗೆರೆಯವರು ಖಾಸಗಿ ವಾಹಿನಿಗೆ ವಿಡಿಯೋ ಮೂಲಕ ಸಂದೇಶ ರವಾನಿಸಿದ್ದರು. ‘ ಕರಾವಳಿ ಜಿಲ್ಲೆಗೆ ಹೋಗಲು ಬಹಳಷ್ಟು ಉತ್ಸುಕನಾಗಿದ್ದೆ. ಅದರಲ್ಲೂ ಅನುತ್ತೀರ್ಣ ವಿದ್ಯಾರ್ಥಿಗಳಿಗೆಂದೇ ಕಾಲೇಜು ಒಂದನ್ನು ಸ್ಥಾಪಿಸುವುದು ನನ್ನ ಜೀವನದ ಬಹುದೊಡ್ಡ ಕನಸಾಗಿತ್ತು. ಇದನ್ನು ಪ್ರಗತಿ ಸ್ಟಡಿ ಸೆಂಟರ್ ನ ಗೆಳೆಯ ಬಹಳ ಹಿಂದೆಯೇ ಸ್ಥಾಪಿಸಿದ್ದಾರೆ. ಇದರಿಂದ ನಾನು ತುಂಬಾ ಖುಷಿಯಾಗಿದ್ದೇನೆ. ಸಂಸ್ಥೆಯ ಮುಖ್ಯಸ್ಥ ಗೋಕುಲ್‍ನಾಥ್ ಅವರು ಬಹಳ ಪ್ರೀತಿಯಿಂದ ಅವರ ವಾರ್ಷಿಕೋತ್ಸವಕ್ಕೆ ಆಹ್ವಾನಿಸಿದ್ದರು. ತೀರ ಅನಾರೋಗ್ಯದ ಹಿನ್ನೆಲೆಯಿಂದ ಬರಲು ಸಾಧ್ಯವಾಗಿರಲಿಲ್ಲ. ದಯವಿಟ್ಟು ಕ್ಷಮಿಸಿ, ಮುಂದೆ ಯಾವುದೇ ಕಾರ್ಯಕ್ರಮಕ್ಕೆ ಅಥವಾ ಖುದ್ದಾಗಿ ಸಂಸ್ಥೆಗೆ ಭೇಟಿ ನೀಡಿ ನನ್ನ ಪತ್ರಿಕೆಯಲ್ಲಿ ಪ್ರಗತಿ ಸ್ಟಡಿ ಸೆಂಟರ್ ನ ಬೆಳವಣಿಗೆಯ ಬಗ್ಗೆ ಬರೆಯುತ್ತೇನೆ’ ಎಂದು ತಿಳಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button