ಗಾಯಕ ಹನಿ ಸಿಂಗ್ ವಿರುದ್ದ ಗೃಹ ಹಿಂಸೆ ಪ್ರಕರಣ…

ನವದೆಹಲಿ: ಬಾಲಿವುಡ್ ಗಾಯಕ ಹನಿ ಸಿಂಗ್ ವಿರುದ್ದ ಅವರ ಪತ್ನಿ ಶಾಲಿನಿ ತಲ್ವಾರ್ ಗೃಹ ಹಿಂಸೆ, ಲೈಂಗಿಕ ಕಿರುಕುಳ, ಹಣಕಾಸು ವಂಚನೆ, ಮಾನಸಿಕ ಹಿಂಸೆಯ ಪ್ರಕರಣ ದಾಖಲಿಸಿದ್ದಾರೆ.
ಅವರು ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ‘ಗೃಹ ಹಿಂಸೆಯಿಂದ ಮಹಿಳೆಯರ ರಕ್ಷಣೆ’ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ನ್ಯಾಯಾಲಯ ಹನಿ ಸಿಂಗ್ ಅವರಿಗೆ ನೋಟೀಸ್ ಜಾರಿ ಮಾಡಿದೆ. ಆಗಸ್ಟ್ 28 ರೊಳಗೆ ಸಮಜಾಯಿಷಿ ನೀಡುವಂತೆ ಆದೇಶಿಸಲಾಗಿದೆ. ಹನಿ ಸಿಂಗ್, ಅವರ ಪತ್ನಿ ಹೆಸರಿನಲ್ಲಿರುವ ಜಂಟಿ ಆಸ್ತಿಗಳ ತಂಟೆಗೆ ಹೋಗದಂತೆ ಶಾಲಿನಿ ತಲ್ವಾರ್ ಅವರ ಪರವಾಗಿ ನ್ಯಾಯಾಲಯ ಮಧ್ಯಂತರ ಆದೇಶಗಳನ್ನು ಜಾರಿಗೊಳಿಸಿದೆ.