ತೆಕ್ಕಿಲ್ ಸೋಕರ್ ಲೀಗ್ 2022 ಪುಟ್ಬಾಲ್ ಲೀಗ್ ಆವೃತ್ತಿ 4 – ರಾಜ್ಯ ನಾಯಕರ ಆಗಮನ…
ಸುಳ್ಯ: ಬೆಟಾಲಿಯನ್ ಎಫ್.ಸಿ.ಅರಂತೋಡು ಇದರ ಅಶ್ರಯದಲ್ಲಿ ತೆಕ್ಕಿಲ್ ಸೋಕರ್ 7 ಜನರ ಪುಟ್ಬಾಲ್ ಲೀಗ್ ಮಾದರಿಯ ಪಂದ್ಯಾಟ ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.
ಪುಟ್ಬಾಲ್ ಪಂದ್ಯಾಟಕ್ಕೆ ಕೆಪಿಸಿಸಿ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಪುಟ್ಟಸ್ವಾಮಿ ಗೌಡ ಭೇಟಿ ನೀಡಿ ಗ್ರಾಮೀಣ ಪ್ರದೇಶದಲ್ಲಿ ಇತಂಹ ಕ್ರೀಡಾ ಕೂಟವನ್ನು ಅಯೋಜಿಸಿ ಯುವಕರಿಗೆ ಪ್ರೋತ್ಸಾಹ ನೀಡುತ್ತಿರುವ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್ ಶಹೀದ್ ರವರ ಕಾರ್ಯ ಅಭಿನಂದಾರ್ಹ. ಗ್ರಾಮೀಣ ಮಟ್ಟದಲ್ಲಿ ಯುವ ಪ್ರತಿಭೆ ಬೆಳೆಯಲು ಇತಂಹ ಕ್ರೀಡಕೂಟ ಅಗತ್ಯ ಪುಟ್ಬಾಲ್ ಪಂದ್ಯಾಟಕ್ಕೆ ಶುಭ ಹಾರೈಸಿದರು.
ಇನ್ನೊರ್ವ ಮುಖ್ಯ ಅತಿಥಿ ಕೆಪಿಸಿಸಿ ಸುಳ್ಯ ಬ್ಲಾಕ್ ಉಸ್ತುವಾರಿ ಕೃಷ್ಣಪ್ಪ ಮಾತನಾಡಿ ಯುವಕರ ಶ್ರಮ ಮತ್ತು ಛಲದಿಂದ ಇಂತಹ ಕ್ರೀಡೆಯನ್ನು ಮುನ್ನಡೆಸಿ ಯುವ ಪ್ರತಿಭೆಯನ್ನು ಬೆಳೆಸುವಂತ ಬೆಟಾಲಿಯನ್ ಎಫ್ ಸಿ.ತಂಡಕ್ಕೆ ಅಭಿನಂದನೆ ಸಲ್ಲಿಸಿ ಯುವಕರು ಹಳ್ಳಿ ಭಾಗದ ಕ್ರೀಡೆಯನ್ನು ಪಟ್ಟಣ ಭಾಗದಲ್ಲಿ ನಡೆಸುತ್ತಿರುವುದು ಸಂತಸ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಕಾರ್ಮಿಕ ಸಚಿವ ನಝೀರ್ ಅಹಮದ್ ಸಿದ್ದೀಕಿಯವರ ಪುತ್ರ ವಜಹಯತ್ ಸಿದ್ದೀಕಿ, ಕೆಪಿಸಿಸಿ ರಾಜ್ಯ ಕಾರ್ಮಿಕ ಘಟಕ ದ ಕಾರ್ಯದರ್ಶಿ ಶ್ರೀನಿವಾಸ,ಈರಣ್ಣ ಮಡಿವಾಳ, ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಮ್.ಶಹೀದ್ ತೆಕ್ಕಿಲ್, ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಶ್ರಫ್ ಗುಂಡಿ,ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದೀಖ್ ಕೊಕೊ, ಯು.ಎಸ್.ಜಿ.ಶಾಮಿಯಾನ ಮಾಲಕ ಸುಕುಮಾರ ಗೌಡ ಉಳುವಾರು, ಟಿ.ಎಮ್ .ಶೈನ್ ತೆಕ್ಕಿಲ್ ಮುಂತಾದವರು ಉಪಸ್ಥಿತರಿದ್ದರು.ಇಜಾಸ್ ಸ್ವಾಗತಿಸಿದರು.