ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ…
ಬಂಟ್ವಾಳ: ಸಂಸ್ಥೆಯ ಬೆಳವಣಿಗೆಗೆ ರೈತರ ಸಹಕಾರ ಅವಶ್ಯಕವಾಗಿದೆ. ತೆಂಗು ಕಂಪನಿಯಿಂದ ಅಡಿಕೆ ಹಳದಿ ರೋಗ ನಿವಾರಣೆಗೆ ಔಷಧಿ ಸಂಶೋಧನೆಯಾಗಿರುವುದು ಮಹತ್ವದ ವಿಚಾರವಾಗಿದೆ. ರೈತರಿಂದ ರೈತರಿಗಾಗಿರುವ ಕಂಪನಿ ರೈತರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತೆಂಗು ರೈತ ಉತ್ಪಾದಕರ ಕಂಪನಿ ವಿಜ್ಞಾನಿ ಡಾ. ಬಿ. ಕೆ. ವಿಶು ಕುಮಾರ್ ಹೇಳಿದರು.
ಅವರು ಮಂಗಳ ಮಂಟಪ ವಿಟ್ಲದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಕಂಪನಿ ನಿಯಮಿತ, ಬಂಟ್ವಾಳ ಕಾರ್ಯ ನಿರತ ಪತ್ರಕರ್ತರ ಸಂಘ, ಲಯನ್ಸ್ ಕ್ಲಬ್ ವಿಟ್ಲ, ಕಾರ್ತಿಕ್ ಫ್ರೆಂಡ್ಸ್ ಚಂದಳಿಕೆ, ಎಲ್. ಎನ್. ಎಸ್. ಎಂ. ಚಾರಿಟೇಬಲ್ ಟ್ರಸ್ಟ್, ಕೆ. ಎಂ. ಸಿ. ಹಾಸ್ಪಿಟಲ್ ಅತ್ತಾವರ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ಬೃಹತ್ ಮೆಡಿಕಲ್ ಕ್ಯಾಂಪ್ ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಅಧ್ಯಕ್ಷ ಮೋನಪ್ಪ ಗೌಡ ಮಾತನಾಡಿ ಶುಚಿತ್ವ ಮತ್ತು ದೇಹಾರೋಗ್ಯದ ಬಗ್ಗೆ ನಾವು ಪ್ರತೀ ಕ್ಷಣ ನಿಗಾ ವಹಿಸಬೇಕು. ಮನುಷ್ಯನ ಭಯವನ್ನೇ ದುರುಪಯೋಗ ಪಡಿಸಿಕೊಳ್ಳುವ ದಿನದಲ್ಲಿ ನಾವಿದ್ದು, ಈ ಬಗ್ಗೆ ಎಚ್ಚರವೂ ನಮಗಿರಬೇಕು. ಲಯನ್ಸ್ ಸಂಸ್ಥೆಯಮೂಲಕ ಹತ್ತಾರು ಸೇವಾ ಕಾರ್ಯಗಳು ನಡೆಯುತ್ತಿದೆ ಎಂದು ತಿಳಿಸಿದರು.
ಸುಮಾರು ೨೧೧ ಮಂದಿ ಶಿಬಿರದಲ್ಲಿ ಭಾಗವಹಿಸಿ ದಂತ ಚಿಕಿತ್ಸೆ, ಎಲುಬು, ಕೀಲು, ಕಣ್ಣು, ಕಿವಿ, ಜನರಲ್ ಮೆಡಿಸಿನ್, ಮಕ್ಕಳ, ಹೆಂಗಸರ ಹಾಗೂ ಚರ್ಮ ರೋಗಗಳ ತಪಾಸಣೆ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಲ್.ಎನ್.ಎಸ್.ಎಂ. ಚಾರಿಟೇಬಲ್ ಟ್ರಸ್ಟ್ ನ ಸಂತೋಷ್ ಶೆಟ್ಟಿ ವಹಿಸಿದ್ದರು.
ಬಂಟ್ವಾಳ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಚಂದಳಿಕೆ ಕಾರ್ತಿಕ್ ಪ್ರೆಂಡ್ಸ್‌ನ ಕೃಷ್ಣ ಮುದೂರು, ಕೆ.ಎಂ.ಸಿ. ವೈದ್ಯಾಧಿಕಾರಿ ಡಾ. ಕನಿಷ್ಕ್, ದಂತ ವೈದ್ಯ ಡಾ. ಅವಿನಾಶ್, ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಕಂಪನಿ ನಿಯಮಿತ ಅಧ್ಯಕ್ಷ ಎಂ. ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಕುಸುಮ್ ರಾಜ್, ನಿರ್ದೇಶಕ ವರ್ಧಮಾನ್ ಜೈನ್, ಕಾರ್ಯ ನಿರ್ವಹಣಾಧಿಕಾರಿ ಜ್ಞಾನ ಮತ್ತಿತರರು ಉಪಸ್ಥಿತರಿದ್ದರು. ನೋಡಲ್ ಅಧಿಕಾರಿ ಸುಬ್ಬು ಸಂಟ್ಯಾರ್ ಕಾರ್ಯಕ್ರಮ ನಿರೂಪಿಸಿದರು.