ಸಚಿವ ಅಂಗಾರ ಅವರಿಗೆ ಬಂದರು ಮತ್ತು ಮೀನುಗಾರಿಕೆ ಖಾತೆಯ ಹೊಣೆ…
ಬೆಂಗಳೂರು: ಸಂಪುಟ ವಿಸ್ತರಣೆಯ ನಂತರ ಇದೀಗ ಸಚಿವರ ಖಾತೆ ಹಂಚಿಕೆ ಹಾಗೂ ಬದಲಾವಣೆಯೂ ಬಹುತೇಕ ಪೂರ್ಣಗೊಂಡಿದ್ದು, ಕಡತವನ್ನು ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸಂಪುಟದ ಸಚಿವರ ಖಾತೆಯ ಹಂಚಿಕೆ ಪ್ರಕ್ರಿಯೆಯನ್ನು ಬುಧವಾರ ತಡರಾತ್ರಿ ಪೂರ್ಣಗೊಳಿಸಿ, ರಾಜ್ಯಪಾಲರ ಅಂಕಿತಕ್ಕೆ ಕಳು ಹಿಸಿಕೊಟ್ಟಿದ್ದು, ,ಇಂದು ರಾಜ್ಯಪಾಲರ ಅಂಕಿತ ಬೀಳುವ ಸಾಧ್ಯತೆಯಿದೆ.
ಸುಳ್ಯದ ಎಸ್. ಅಂಗಾರ (ಬಂದರು ಮತ್ತು ಮೀನುಗಾರಿಕೆ), ಕೋಟ ಶ್ರೀನಿವಾಸ ಪೂಜಾರಿ (ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ), ಉಮೇಶ್ ಕತ್ತಿ (ಆಹಾರ, ನಾಗರಿಕ ಪೂರೈಕೆ ಇಲಾಖೆ), ಬಸವರಾಜ ಬೊಮ್ಮಾಯಿ (ಗೃಹ, ಕಾನೂನು, ಸಂಸದೀಯ ವ್ಯವಹಾರ), ಜೆ.ಸಿ.ಮಾಧುಸ್ವಾಮಿ (ವೈದ್ಯಕೀಯ ಶಿಕ್ಷಣ, ಕನ್ನಡ-ಸಂಸ್ಕೃತಿ ಇಲಾಖೆ), ಸಿ.ಸಿ.ಪಾಟೀಲ್ (ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ) ಅರವಿಂದ ಲಿಂಬಾವಳಿ (ಅರಣ್ಯ), ಮುರುಗೇಶ್ ನಿರಾಣಿ (ಗಣಿ, ಭೂ ವಿಜ್ಞಾನ), ಎಂಟಿಬಿ ನಾಗರಾಜ್ (ಅಬಕಾರಿ), ಡಾ| ಕೆ. ಸುಧಾಕರ (ಆರೋಗ್ಯ), ಆನಂದ್ ಸಿಂಗ್ (ಪ್ರವಾ ಸೋದ್ಯಮ, ಪರಿಸರ ಇಲಾಖೆ), ಸಿ. ಪಿ. ಯೋಗೇಶ್ವರ್ (ಸಣ್ಣ ನೀರಾವರಿ), ಆರ್. ಶಂಕರ್(ಪೌರಾಡಳಿತ ಹಾಗೂ ರೇಷ್ಮೆ ಇಲಾಖೆ), ಗೋಪಾಲಯ್ಯ (ತೋಟಗಾರಿಕೆ, ಸಕ್ಕರೆ), ಕೆ.ಸಿ. ನಾರಾಯಣ ಗೌಡ(ಯುವ ಸಬಲೀಕರಣ, ಕ್ರೀಡೆ, ಹಜ್ ಮತ್ತು ವಕ್ಫ್) ಖಾತೆ ನೀಡಲಾಗುತ್ತದೆ ಎನ್ನಲಾಗಿದೆ.