ರಾಜ್ಯದಲ್ಲಿ ಕಾಂಗ್ರೆಸ್ ಬಿರುಗಾಳಿ…ಬಿಜೆಪಿ ದೂಳಿಪಟ… ಇದು ಬಡವರ ಗೆಲುವು- ಟಿ.ಎಂ ಶಹೀದ್ ತೆಕ್ಕಿಲ್ ಸಂತಸ…
ಸುಳ್ಯ:ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಶ್ರೀಮತಿ ಸೋನಿಯ ಗಾಂಧಿ, ಶ್ರೀ ರಾಹುಲ್ ಗಾಂಧಿ, ಶ್ರೀಮತಿ ಪ್ರಿಯಾಂಕ ಗಾಂಧಿ,ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ , ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮ್ಮದ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಸಹಿತ ಪಕ್ಷದ ಹಲವಾರು ರಾಷ್ಟ್ರ,ರಾಜ್ಯ,ಜಿಲ್ಲೆ,ಬ್ಲಾಕ್,ಬೂತ್ ಮಟ್ಟದ ಪ್ರಮುಖ ಮುಖಂಡರ ಪಕ್ಷದ ಕಾರ್ಯಕರ್ತರ ಸತತ ಪ್ರಯತ್ನದಿಂದ ಕಾಂಗ್ರೆಸ್ ಪಕ್ಷವು ಕರ್ನಾಟಕ ರಾಜ್ಯದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ಬಿ.ಜೆ.ಪಿ ಯು ದೂಳಿಪಟವಾಗಿದೆ ಎಂದು ಕೆ.ಪಿ.ಸಿ.ಸಿ ಮುಖ್ಯ ವಕ್ತಾರ ಹಾಗೂ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಟಿ.ಎಂ ಶಹೀದ್ ತೆಕ್ಕಿಲ್ ತಿಳಿಸಿದ್ದಾರೆ .
ಬಿ.ಜೆ.ಪಿ.ಅಭ್ಯರ್ಥಿಗಳು ಗೆದ್ದಂತಹ ಕ್ಷೇತ್ರಗಳು ಅತೀ ಕಡಿಮೆ ಮಾರ್ಜಿನ್ ನಲ್ಲಿ ಗೆದ್ದಿದ್ದರೆ ಕಾಂಗ್ರೇಸ್ ಕ್ಷೇತ್ರದ ಅಭ್ಯರ್ಥಿಗಳು ಲಕ್ಷಕ್ಕಿಂತ ಅಧಿಕ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದು ಜನಪರವಾದ ಕಾಂಗ್ರೇಸ್ ಬದ್ಧತೆಗೆ ಮತ್ತು ಬಿಜೆಪಿಯ ಭ್ರಷ್ಟಾಚಾರದ ಮತ್ತು ಕೋಮುವಾದಕ್ಕೆ ವಿರುದ್ದದ ತೀರ್ಪಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನ ಇನ್ನೂ ಕೋಮುವಾದ ಚಿಂತನೆಯಿಂದ ಹೊರಬಂದಿಲ್ಲ, ಅಭಿವೃದ್ಧಿ ಪರವಾಗಿ ಮತ ನೀಡಿಲ್ಲ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾರ್ಯಕರ್ತರು ಈ ಸೋಲಿನಿಂದ ಎದೆಗುಂದದೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಮುಂಬರುವ ಕಾಂಗ್ರೆಸ್ ಸರಕಾರ ಜನಪರ ಆಡಳಿತ ನೀಡಲಿದ್ದು,ಭವಿಷ್ಯದ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಗೆಲುವನ್ನು ಮುಂದುವರಿಸಲಿದೆ. ಕೊಡಗಿನ ಜನ ಅಭಿವೃದ್ದಿ ಪರವಾದ ಚಿಂತನೆಯಿಂದ ಮತವನ್ನು ಕಾಂಗ್ರೆಸ್ ಪರವಾಗಿ ಹಾಕಿ ಕಾಂಗ್ರೇಸ್ ಸಮರ್ಥ ಅಭ್ಯರ್ಥಿಗಳಾದ ಎ ಎಸ್ ಪೊನ್ನಣ್ಣ, ಮಂತರ್ ಗೌಡರವರನ್ನು ಗೆಲ್ಲಿಸಿದ್ದಾರೆ. ವಿಶೇಷವಾಗಿ ಕೊಡಗಿನ ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ಕೊಡಗು ಜಿಲ್ಲಾ ಕೆಪಿಸಿಸಿ ಮಾಜಿ ಉಸ್ತುವಾರಿಯಾದ ಟಿ.ಎಂ ಶಹೀದ್ ತೆಕ್ಕಿಲ್ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿರೋದ್ಯೋಗಿ ಸಮಸ್ಯೆಯನ್ನು ಪರಿಹರಿಸಿಲ್ಲ, ಬೆಲೆ ಏರಿಕೆ ನಿಯಂತ್ರಿಸಿಲ್ಲ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಸರಕಾರ ಬದಲಾವಣೆ ಖಚಿತ ಎಂದೂ ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಭವಿಷ್ಯ ನುಡಿದಿದ್ದಾರೆ.
140 ಸ್ಥಾನ ಪಡೆಯುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ಭವಿಷ್ಯ ನಿಜವಾಗಿದೆ. ಅವರು ಅಧ್ಯಕ್ಷರಾದ ದಿನದಿಂದ ದಿವಸದ 20 ಘಂಟೆಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದು ಕೇಂದ್ರ ಸರಕಾರ ರಾಜ್ಯ ಸರಕಾರ ಸತತವಾಗಿ ಅವರಿಗೆ ಕಿರುಕುಳ ನೀಡಿದೆ. ಇಡಿ, ಐಟಿ ಅವರನ್ನ ಹಿಂಬಾಲಿಸಿ ಕಿರುಕುಳ ನೀಡಿದ್ದರೂ ಅದನ್ನು ಲೆಕ್ಕಿಸದೆ ಪಕ್ಷವನ್ನು ಅಧಿಕಾರಕ್ಕೆ ತರಲು ಡಿ ಕೆ ಶಿವಕುಮಾರ್ ಅವರು ಪ್ರಮುಖ ಕಾರಣಕರ್ತ ರಾಗಿದ್ದಾರೆ. ಅವರನ್ನು ವಿಶೇಷವಾಗಿ ಅಭಿನಂದಿಸುವುದಾಗಿ ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತಿಳಿಸಿದ್ದಾರೆ.