ಅತ್ಯಾಚಾರ ಆರೋಪ – ಕಲ್ಮಡ್ಕ ಗ್ರಾಪಂ ಅಭ್ಯರ್ಥಿ ಬಂಧನ…
ಸುಳ್ಯ: ಕಲ್ಮಡ್ಕ ಗ್ರಾಮದ ವಾರ್ಡ್–1ರಿಂದ ಸ್ಪರ್ಧಿಸುತ್ತಿರುವ ಹುಕ್ರಪ್ಪ ಯಾನೆ ನಾರಾಯಣ ಪುಚ್ಚಮ ಎಂಬ ಅಭ್ಯರ್ಥಿಯೋರ್ವನನ್ನು ತನ್ನ ಚಿಕ್ಕಪ್ಪನ ಅಪ್ರಾಪ್ತ ಮಗಳನ್ನು ಅತ್ಯಾಚಾರ ಎಸಗಿದ ಆರೋಪದಲ್ಲಿ ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ತನ್ನ ಚಿಕ್ಕಪ್ಪನ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಆರೋಪಿಯನ್ನು ಚುನಾವಣೆಯ ಹಿಂದಿನ ದಿನ ಬಂಧಿಸಿದ್ದಾರೆ.