ದಕ್ಷಿಣ ಕನ್ನಡ ಜಿಲ್ಲಾ ಎನ್ಎಸ್ ಯು ಐ ಕಾರ್ಯದರ್ಶಿಯಾಗಿ ಉಬೈಸ್ ಗೂನಡ್ಕ ನೇಮಕ…

ಸುಳ್ಯ: ಸುಳ್ಯ ತಾಲೂಕು ಎನ್ ಎಸ್ ಯು ಐ ಕಾರ್ಯದರ್ಶಿ ಉಬೈಸ್ ಗೂನಡ್ಕ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಎನ್ ಎಸ್ ಯು ಐ (ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ) ಇದರ ಕಾರ್ಯದರ್ಶಿಯಾಗಿ ರಾಜ್ಯ ಎನ್ ಎಸ್ ಯು ಐ ನ ಅಧ್ಯಕ್ಷರಾದ ಕೀರ್ತಿ ಗಣೇಶ್ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಎನ್ ಎಸ್ ಯು ಐ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಉಬೈಸ್ ಗೂನಡ್ಕ ಅವರು ಅನೇಕ ವಿದ್ಯಾರ್ಥಿಗಳು ಶಾಲಾ ಫೀಸ್ ಕಟ್ಟಲು ತೊಂದರೆ ಆದಾಗ ದಾನಿಗಳಿಂದ ಹಾಗೂ ಬೇರೆ ಇತರ ಮೂಲಗಳಿಂದ ಸಹಾಯ ಮಾಡಿದ್ದಾರೆ. ವಿದ್ಯಾರ್ಥಿಗಳ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಇವರ ಸಂಘಟನಾ ಸಾಮರ್ಥ್ಯವನ್ನು ರಾಜ್ಯ ಅಧ್ಯಕ್ಷರು ಇತ್ತೀಚೆಗೆ ಗೂನಡ್ಕ ಸಜ್ಜನ ಸಭಾ ಭವನದಲ್ಲಿ ರಾತ್ರಿ ಎರಡು ಗಂಟೆಗೆ ಸೇರಿಸಿದ್ದ ಎನ್ ಎಸ್ ಯು ಐ ವಿದ್ಯಾರ್ಥಿಗಳನ್ನು ಕಂಡು ಟಿ ಎಂ ಶಾಹೀದ್ ಅವರಲ್ಲಿ ರಾಜ್ಯಾಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಬಗ್ಗೆ ತಿಳಿದು ವಿದ್ಯಾರ್ಥಿಗಳನ್ನು ಮತ್ತು ಸಂಘಟನೆ ನೋಡಿ ಕೊಂಡಾಡಿ, ಅವರನ್ನು ಉನ್ನತ ಹುದ್ದೆಗೆ ನೇಮಕ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಇವರ ಕೆಲಸದಿಂದ ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಡಿ ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕರುಗಳಾದ ಸಿದ್ಧರಾಮಯ್ಯ, ಬಿ ಕೆ ಹರಿಪ್ರಸಾದ್ ಹಾಗೂ ರಾಜ್ಯದ, ಜಿಲ್ಲೆಯ ಹಿರಿಯ ನಾಯಕರ ಗಮನ ಸೆಳೆದಿದ್ದರು.
ಉಬೈಸ್ ಗೂನಡ್ಕ ಸಂಪಾಜೆ ಗ್ರಾಮದ ಪ್ರಥಮ ಮುಸ್ಲಿಮ್ ಪಂಚಾಯತ್ ಸದಸ್ಯರಾಗಿ, 20 ವರ್ಷಗಳ ಕಾಲ ಸಂಪಾಜೆ ಸಹಕಾರಿ ಸಂಘದ ನಿರ್ದೇಶಕರಾಗಿ, ಗೂನಡ್ಕ ಹಾಲು ಸೊಸೈಟಿ ಸ್ಥಾಪಕ ಅಧ್ಯಕ್ಷರಾಗಿ, ಕೆ ಕೆ ಪೈ ಅವಿಭಕ್ತ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ಸಮಿತಿಯಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾಗಿ, ಸುಳ್ಯ ತಾಲ್ಲೂಕು ಎಪಿಎಂಸಿ ಉಪಾಧ್ಯಕ್ಷರಾಗಿ, ಕೆ ಡಿ ಪಿ ಸದಸ್ಯರಾಗಿ, ಭೂ ನ್ಯಾಯ ಮಂಡಳಿ ಸದಸ್ಯರಾಗಿ ,ಗೂನಡ್ಕ ಬದ್ರಿಯಾ ಜಮ ಅತಿನ ಸ್ಥಾಪಕ ಅಧ್ಯಕ್ಷರಾಗಿ ದುಡಿದು ಪ್ರಸ್ತುತ ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ಪಾಪ್ಯುಲರ್ ಎಜುಕೇಷನ್ ಸೊಸೈಟಿ ಯ ಸ್ಥಾಪಕ ನಿರ್ದೇಶಕರಾಗಿ ದುಡಿಯುತ್ತಿರುವ ಹಿರಿಯರಾದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಸಹಕಾರಿ ಧುರೀಣ ಪುತ್ರಿ ಉಮ್ಮರ್ ಹಾಜಿ ಗೂನಡ್ಕ ರವರ ಹಾಗೂ ರುಕ್ಯ ದಂಪತಿಗಳ ಕೊನೆಯ ಪುತ್ರ. ದ್ವಿತೀಯ ಪಿ ಯು ಸಿ ವಿದ್ಯಾರ್ಥಿಯಾದ ಉಬೈಸ್ ಗೂನಡ್ಕ ಇತ್ತೀಚೆಗೆ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಗೂನಡ್ಕದ ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿಯಾದ ಇವರು ಗೂನಡ್ಕದ ಪ್ರತಿಷ್ಠಿತ ಪುತ್ರಿ ಮನೆತನದವರು. ಇವರು ರಾಜ್ಯದಲ್ಲೆ ಅತ್ಯಂತ ಕಿರಿಯ ವಯಸ್ಸಿನ ಪದಾಧಿಕಾರಿಯಾಗಿದ್ದಾರೆ.