ಶ್ರೀ ಮಹಮ್ಮಾಯಿ ಸೇವಾ ಸಮಿತಿ ಬರಿಮಾರು- ಯೋಗಾಭ್ಯಾಸದ ವಾರ್ಷಿಕೋತ್ಸವ…

ಬಂಟ್ವಾಳ:ಶ್ರೀ ಮಹಮ್ಮಾಯಿ ಸೇವಾ ಸಮಿತಿ ಬರಿಮಾರು ಇದರ ಆಶ್ರಯದಲ್ಲಿ ಶ್ರೀ ದೇವಿ ಭಜನಾ ಮಂದಿರದಲ್ಲಿ ಯೋಗಾಭ್ಯಾಸದ ವಾರ್ಷಿಕೋತ್ಸವವು ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ ಇವರ ಅದ್ಯಕ್ಷತೆಯಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ,ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಭಾಗವಹಿಸಿ ಮಾತನಾಡಿ, ಇಂದು ಯೋಗವು ದೈನಂದಿನ ಬದುಕಿನಲ್ಲಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅವಶ್ಯಕವಾಗಿದೆ. ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಕೊರೊನ ಸೇರಿದಂತೆ ಇತರ ರೋಗಗಳಿಂದ ಮುಕ್ತರಾಗಬಹುದು ಎಂದರು.
ಈ ಸಂದರ್ಭದಲ್ಲಿ ಯೋಗ ಗುರುಗಳಾದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಯೋಗ ಶಿಕ್ಷಕ ಕುಮಾರ್ ಇವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ತರಬೇತುದಾರ ರಾಜಾರಾಮ ಐತಾಳ್ , ಮಹಮ್ಮಾಯಿ ಸೇವಾ ಸಮಿತಿ ಅದ್ಯಕ್ಷ ಜಯಂತ , ರತ್ನಾಕರ, ಸದಾಶಿವ ಜಿ. ಉಪಸ್ಥಿತರಿದ್ದರು.
ಅಶೋಕ್ ಕುಮಾರ್ ಸ್ವಾಗತಿಸಿ, ಗೀತಾ ಶಿವಾನಂದ ವಂದಿಸಿದರು. ಶಂಕರ ಅಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

Related Articles

Leave a Reply

Your email address will not be published. Required fields are marked *

Back to top button