ಬಸ್ ಬೈಕ್ ಡಿಕ್ಕಿ -ಅಪ್ಪ ಮಗ ಅಪಘಾತಕ್ಕೆ ಬಲಿ…

ಬಂಟ್ವಾಳ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಕುವೆತ್ತಿಲ ಎಂಬಲ್ಲಿ ರಸ್ತೆ ತಿರುವಿನಲ್ಲಿ ಕೆಎಸ್ ಆರ್ ಟಿ ಸಿ ಬಸ್ ಮತ್ತು ಬೈಕ್ ನಡುವೆ ಭಾನುವಾರ ಮುಖಾಮುಖಿ ಡಿಕ್ಕಿಯಾಗಿದೆ.
ಘಟನೆಯಲ್ಲಿ ಬಂಟ್ವಾಳ ತಾಲೂಕಿನ ನರಿಕೊಂಬು ಬಳಿಯ ಬೋರುಗುಡ್ಡೆ ನಿವಾಸಿ ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಸಮಾಜ ಸೇವಾ ಬ್ಯಾಂಕ್ ನಿರ್ದೇಶಕರಾದ ಅರುಣ ಕುಲಾಲ್‌(45 ) ಹಾಗೂ ಅವರ ಪುತ್ರ ಧ್ಯಾನ್ (15)ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ಅವರು ಸುಳ್ಯದಲ್ಲಿ ನಡೆಯಲಿದ್ದ ಮದುವೆಗಾಗಿ ಹೊರಟಿದ್ದರು. ತಾಯಿ ಬಸ್ಸಿನಲ್ಲಿ ಪ್ರಯಾಣಿಸಿದ್ದರು. ತಂದೆ ಮಗ ಬೈಕ್ ನಲ್ಲಿ ಹೋಗುತ್ತಿದ್ದರು.
ಬಸ್ ಚಾಲಕನ ಅಜಾಗರೂಕತೆಯಿಂದ ಇಬ್ಬರು ಜೀವಕಳೆದುಕೊಳ್ಳುವಂತಾಯಿತು. ಚಾಲಕನ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button