ನೆಲ್ಲೂರು ಕೆಮ್ರಾಜೆ – ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಲಾಭಾಂಶ ವಿತರಣೆ…

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆಲ್ಲೂರು ಕೆಮ್ರಾಜೆ ಗ್ರಾಮದ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮವು ನೆಲ್ಲೂರು ಕೆಮ್ರಾಜೆ ಪಂಚಾಯತ್ ಸಭಾಂಗಣದಲ್ಲಿ ಜರಗಿತು.
ವಲಯ ಒಕ್ಕೂಟದ ಅಧ್ಯಕ್ಷ ಶ್ರೀ ಭಾಸ್ಕರ್ ರಾವ್ ಚೆನ್ನಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಬೆಟ್ಟ ರಾಜಾರಾಮ್ ಭಟ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಅತಿಥಿಗಳಾಗಿ ಪಂಚಾಯತ್ ಉಪಾಧ್ಯಕ್ಷ ಶ್ರೀ ಧನಂಜಯ ಕುಮಾರ್, ಸದಸ್ಯರಾದ ರಾಮಚಂದ್ರ ಪ್ರಭು, ವೇಣುಗೋಪಾಲ್ ತುಂಬೆತ್ತಡ್ಕ, ಗಟ್ಟಿಗಾರು ಒಕ್ಕೂಟ ಅಧ್ಯಕ್ಷರಾದ ಚಂದ್ರಶೇಖರ ಹರ್ಲಡ್ಕ, ಸೀತಾರಾಮ್ ಕುದ್ಪಾಜೆ ಭಾಗವಹಿಸಿದ್ದರು.
ಸಾಂಕೇತಿಕವಾಗಿ ಮೂರು ತಂಡಗಳಿಗೆ ಅತಿಥಿಗಳು ಚೆಕ್ ವಿತರಿಸಿದರು. ವಲಯ ಮೇಲ್ವಿಚಾರಕ ಶ್ರೀ ನವೀನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ಸೇವಾ ಪ್ರತಿನಿಧಿ ಶ್ರೀಮತಿ ಸವಿತಾ ವಂದಿಸಿದರು.

4f1f386a 09ee 4216 Bca3 09b6e87ede77 300x139

4342decf F0c4 41eb B656 26ad2d51752e 300x139

Related Articles