ಗೂನಡ್ಕ ತೆಕ್ಕಿಲ್ ಮಾದರಿ ಶಾಲೆಯಲ್ಲಿ ಸಂಪನ್ನಗೊಂಡ ಸ್ವಾತಂತ್ರ್ಯ ಅಮೃತಮಹೋತ್ಸವ…
ಸುಳ್ಯ: ಗೂನಡ್ಕ ತೆಕ್ಕಿಲ್ ಮಾದರಿ ಪ್ರಾಥಮಿಕ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಸಂಭ್ರಮದಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ತೆಕ್ಕಿಲ್ ಶಾಲೆಯ ಮಾಜಿ ಮುಖ್ಯೋಪಾಧ್ಯಾಯರಾದ ದಾಮೋದರ ಮಾಸ್ತರ್ ನೆರವೇರಿಸಿ, ನಮ್ಮ ಅನೇಕ ಮಹನೀಯರು ಹೋರಾಡಿ ತ್ಯಾಗ ಬಲಿದಾನದ ಮೂಲಕ ಸ್ವಾತಂತ್ರ್ಯವನ್ನು ತಂದುಕೊಟ್ಟಿರುತ್ತಾರೆ. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಜ್ಜನ ಪ್ರತಿಷ್ಠಾನ ಗೂನಡ್ಕ ಇದರ ಅಧ್ಯಕ್ಷ ಡಾ| ಉಮ್ಮರ್ ಬೀಜದ ಕಟ್ಟೆ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ಸ್ಮರಿಸಿ ದೇಶಪ್ರೇಮವನ್ನು ಮೈಗೂಡಿಸಬೇಕು ಮತ್ತು ಪ್ರತಿಯೊಬ್ಬರು ದೇಶದ ಪ್ರಗತಿಗೆ ಕೈಜೋಡಿಸಲು ವಿನಂತಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನಕರ ಸಣ್ಣಮನೆ ವಹಿಸಿದ್ದರು. ಶಾಲಾ ಆಡಳಿತಾಧಿಕಾರಿ ರಹೀಮ್ ಬೀಜದಕಟ್ಟೆ, ಶಾಲಾ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷೆ ದೀಪಿಕಾ, ಶಾಲಾ ಮುಖ್ಯೋಪಾಧ್ಯಾಯಿನಿ ಕೆ. ವಾಣಿ, ದಯಾನಂದ ಓಟೆಡ್ಕ, ಎಸ್.ಡಿ.ಎಂ.ಸಿ ಸದಸ್ಯರುಗಳು, ಅಧ್ಯಾಪಕ ವೃಂದ ಹಾಗು ಪೋಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ, ದೇಶಭಕ್ತಿಗೇತೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿಧ್ಯಾರ್ಥಿ ನಾಯಕ ಉಫೈಫ್ ಸ್ವಾಗತಿಸಿದರು. ವಿಧ್ಯಾರ್ಥಿನಿಯರಾದ ರೇಷ್ಮ ವಂದಿಸಿದರು. ಜಶಿಕಾ ಕಾರ್ಯಕ್ರಮ ನಿರೂಪಿಸಿದರು.