ರೋಟರಿ ಕ್ಲಬ್ ಬಂಟ್ವಾಳ- ಅಂಧ ಕಲಾವಿದರಿಗೆ ಗೃಹ ನಿರ್ಮಾಣಕ್ಕೆ ಭಯಂಕೇಶ್ವರ ದೇವಸ್ಥಾನದಿಂದ 5 ಲಕ್ಷ ಸಹಾಯ ಹಸ್ತ…
ಬಂಟ್ವಾಳ, ದ.1 : ರೋಟರಿ ಕ್ಲಬ್ ಬಂಟ್ವಾಳದ ವತಿಯಿಂದ ಅಂಧ ಕಲಾವಿದರಿಗಾಗಿ ನೂತನ ಗೃಹ ನಿರ್ಮಾಣ ಯೋಜನೆಯನ್ನು ರೂಪಿಸಲಾಗಿದೆ.
ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅಂಧ ಕಲಾವಿದರಿಗೆ ಸಂಗೀತ ತರಬೇತಿ, ಸಾಂಸ್ಕೃತಿಕ ಕಾರ್ಯಕ್ರಮ ತರಬೇತಿಯನ್ನು ನೀಡುವ ಉದ್ದೇಶದಿಂದ ಸಾಂಸ್ಕೃತಿಕ ಭವನ ನಿರ್ಮಾಣವಾಗಲಿದೆ. ಕೇವಲ 4 ಅಂಧ ಕಲಾವಿದರು ಪ್ರಾರಂಭಿಸಿದ ಸಂಗೀತ ಕಲಾ ತಂಡವು ಪ್ರಸ್ತುತ 20 ಕಲಾವಿದರನ್ನು ಹೊಂದಿದೆ. ಅವರಿಗೆ ವಾಸಕ್ಕೆ ಮನೆ ಇಲ್ಲದೆ ಇರುವುದನ್ನು ಮನಗಂಡು ಬಂಟ್ವಾಳ ರೋಟರಿ ಕ್ಲಬ್ ಗೃಹ ನಿರ್ಮಾಣ ಯೋಜನೆ ರೂಪಿಸಿದೆ ಎಂದು ರೋಟರಿ ಮಾಜಿ ಗವರ್ನರ್ ಪ್ರಕಾಶ ಕಾರಂತರು ತಿಳಿಸಿದ್ದಾರೆ.
ನರಿಕೊಂಬು ಗ್ರಾಮದ ಬರ್ಸಗುರಿ ಎಂಬಲ್ಲಿ ಸುಮಾರು 0.15 ಸೆಂಟ್ಸ್ ಸ್ಥಳವನ್ನು ಸ್ಥಳೀಯ ದಾನಿಯೋರ್ವರು ದಾನವಾಗಿ ನೀಡಿರುತ್ತಾರೆ. ಈಗಾಗಲೇ ಸುಮಾರು ರೂ.5 ಲಕ್ಷದ ಕಾಮಗಾರಿಯನ್ನು ಪೂರೈಸಲಾಗಿದ್ದು ಸುಂದರವಾದ ಭವನವು ನಿರ್ಮಾಣವಾಗಲಿದೆ. ಪಾಣೆಮಂಗಳೂರು ಭಯಂಕೇಶ್ವರ ದೇವಸ್ಥಾನದ ವತಿಯಿಂದ ಸಹಾಯಧನವಾಗಿ ರೂ. 5ಲಕ್ಷವನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದ್ಯಮಿ ರಘುನಾಥ ಸೋಮಯಾಜಿಯವರು ಹಸ್ತಾಂತರಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಭುವನೇಶ್ ಪಾಣೆಮಂಗಳೂರು, ಲೋಕೇಶ್ ನರಹರಿ ನಗರ, ಉದ್ಯಮಿ ನವೀನ್, ಆಡಳಿತ ಸಮಿತಿ ಸದಸ್ಯ ಶಂಕರ ನಾರಾಯಣ , sಸಾಮಾಜಿಕ ಕಾರ್ಯಕರ್ತ ಪ್ರೇಮನಾಥ ಶೆಟ್ಟಿ , ರೋಟೇರಿಯನ್ ನಾರಾಯಣ ಹೆಗ್ಡೆ, ಮೊದಲಾದವರು ಉಪಸ್ಥಿತರಿದ್ದರು.





