ಕರವೇ ವತಿಯಿಂದ ಪ್ರಾಥಮಿಕ ಶಾಲೆಗೆ ಜಾರು ಬಂಡಿ ಕೊಡುಗೆ…

ಪುತ್ತೂರು: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಉನೈಸ್ ಪೆರಾಜೆ ರವರು ನಡೆಸುವ 36ನೇ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪೇರಲ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಾಲೆಗೆ ಉಚಿತವಾಗಿ ನೀಡಿದ ಆಟೋಪಕರಣಗಳಾದ ಜಾರು ಬಂಡಿ ಹಾಗೂ ಇನ್ನಿತರ ಸಲಕರಣೆಗಳನ್ನು ಸುನಿತಾ ಮಹೇಶ್ವರೀ ಮತ್ತು ಅರ್ಜುನ್ ಕಲ್ಯಾಣಪುರ ನೀಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಕುಕ್ಕುವಳ್ಳಿ ಮಹಮ್ಮದ್ ಹಾಜಿ ಉಪಸ್ಥಿತರಿದ್ದರು.

