ಮಂಡೆಕೋಲಿನಲ್ಲಿ ಮರ್ ಹೂಂ ನೌಷಾದ್ ಹಾಜಿ ಸೂರಲ್ಪಾಡಿ ಅನುಸ್ಮರಣೆ ಹಾಗೂ ಏಕದಿನ ಮತ ಪ್ರಭಾಷಣ…
ದೇವರ ಭಯ, ಧರ್ಮದ ಆಚರಣೆಯಿಂದ ಜೀವನದ ಕಷ್ಠಗಳು ಮಾಯ - ಹಾಫಿಲ್ ಸಿರಾಜುದ್ಧೀನ್ ಖಾಸೀಮಿ ಪತ್ತನಾಪುರ…
ಸುಳ್ಯ:ಧರ್ಮಾಚರಣೆ ಇದ್ದರೆ ಬದುಕಿನಲ್ಲಿ ಜೀವನದಲ್ಲಿ ಎದುರಾಗುವ ಕಷ್ಟಗಳು ಮಾಯವಾಗಿ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಖ್ಯಾತ ವಾಗ್ಮಿ ಹಾಫಿಲ್ ಸಿರಾಜುದ್ಧೀನ್ ಖಾಸಿಮಿ ಪತ್ತನಾಪುರ ಹೇಳಿದ್ದಾರೆ.
ಮಂಡೆಕೋಲಿನಲ್ಲಿ ಲಿಯಾವುಲ್ ಇಸ್ಲಾಂ ಯೂತ್ ಫೆಡರೇಶನ್ ನ 15ನೇ ವರ್ಷದ ಕ್ರಿಶ್ಟಲ್ ಜುಬಿಲಿ ಸಮ್ಮೇಳನ ಬಡ ಹೆಣ್ಣು ಮಕ್ಕಳ ವಿವಾಹ, ಬಡವರಿಗೆ ಮನೆ ನಿರ್ಮಾಣಕ್ಕೆ ಧನ ಸಹಾಯ ನೀಡುವ ಅಂಗವಾಗಿ ಮಂಡೆಕೋಲಿನ ಮರ್ ಹೂಂ ಶಾಲೆಕ್ಕಾರ್ ಮಹಮ್ಮದ್ ಕುಂಞಿ ವೇದಿಕೆಯಲ್ಲಿ ಜ.8 ರಂದು ನಡೆದ ಮರ್ ಹೂಂ ನೌಷದ್ ಹಾಜಿ ಸೂರಲ್ಪಾಡಿ ಅನುಸ್ಮರಣೆ ಹಾಗೂ ಏಕದಿನ ಮತ ಪ್ರಭಾಷಣದಲ್ಲಿ ಮಾತನಾಡಿದರು. ಜೀವನದಲ್ಲಿ ಎಷ್ಟೇ ಕಷ್ಟಗಳು, ಸವಾಲುಗಳು ಎದುರಾದರು ಅದನ್ನು ಎದುರಿಸಲು ಧರ್ಮಾಚರಣೆ ಮತ್ತು ದೇವರ ಶಕ್ತಿ ತುಂಬಲಿದೆ ಎಂದರು.
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಪ್ರಾಸ್ತಾವಿಕವಾಗಿ ಮಾತನಾಡಿ ಧರ್ಮಗಳ ಮಧ್ಯೆ ಸಾಮರಸ್ಯ, ಸೌಹಾರ್ದತೆ ಕಾಪಾಡಲು ಎಲ್ಲರೂ ಸಹಕಾರ ನೀಡಬೇಕು. ಧರ್ಮದ ಆಚರಣೆ ಮಾಡುವುದರ ಜೊತೆಗೆ ಇತರ ಧರ್ಮಗಳನ್ನು ಗೌರವಿಸಬೇಕು ಎಂದು ಹೇಳಿದರಲ್ಲದೆ ಯುವಕ ನೌಶಾದ್ ಹಾಜಿ ಸೂರಲ್ಪಾಡಿರ ಸೇವೆಯನ್ನು ಸ್ಮರಿಸಿದರು.
ಮುಖ್ಯ ಅತಿಥಿಗಳಾದ ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮಾತನಾಡಿ ಇಂದಿನ ಕಾಲದಲ್ಲಿ ಸಮಾಜದಲ್ಲಿ ಸೌಹಾರ್ದತೆ ಸಾಮಾಜಿಕ ಸಾಮರಸ್ಯ ಅತೀ ಅಗತ್ಯ ಎಂದು ಹೇಳಿದರು.
ಖಾಝಿ ಅಸ್ಸಯ್ಯದ್ ಮುಹಮ್ಮದ್ ಮದನಿ ತಂಙಳ್ ಮೊಗ್ರಾಲ್ ದುವಾ ನಡೆಸಿ ಉದ್ಘಾಟನೆ ನೆರೆವೇರಿಸಿದರು. ಮಂಡೆಕೋಲು ಮಾರ್ಗ ಮುಹಿದ್ದೀನ್ ಜುಮಾ ಮಸ್ಜೀದ್ ಅಧ್ಯಕ್ಷ ರಾಫಿ ಶಾಲೆಕ್ಕಾರ್ ಅಧ್ಯಕ್ಷತೆ ವಹಿಸಿದರು. ಖತೀಬರಾದ ಶಮೀಮ್ ಅರ್ಶದಿ ಸ್ವಾಗತಿಸಿದರು. ಮುಖ್ಯ ಅತಿಥಿಗಾಗಿ ಮಂಡೆಕೋಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಸದಾನಂದ ಮಾವಜಿ,ಕೆ.ಎಂ ಮುಸ್ತಫ, ಸಂಶುದ್ಧೀನ್, ಅಬ್ದುಲ್ ರಹೆಮಾನ್ ಸಂಕೇಶ್, ಹಾಜಿ ಇಭ್ರಾಹಿಂ ಸೀಫುಡ್, ನ್ಯಾಯವಾದಿ ಮೂಸ ಪೈಬೇಚಾಲ್ ನ್ಯಾಯವಾದಿ ಪವಾಝ್ ಕನಕಮಜಲು, ನ್ಯಾಯವಾದಿ ಅಬೂಬಕ್ಕರ್ ಅಡ್ಕಾರ್, ಹಮೀದ್ ಕುತ್ತಮೊಟೆ, ಅಬ್ದುಲ್ ಗಫೂರ್ ಕಲ್ಮಡ್ಕ, ಇಸ್ವಾಲ್ ಪಡ್ಪಿನಂಗಡಿ, ಅಬ್ದುಲ್ ಮಜೀದ್ ನಡುವಡ್ಕ, ಶಾಫಿ ಕುತ್ತಮೊಟ್ಟೆ, ಸಿದ್ದೀಕ್ ಕ್ಕೊಕ್ಕೊ, ಹಮೀದ್ ಮೌಲವಿ ಶುಂಠಿಕೊಪ್ಪ, ಯೂಸೂಫ್ ಬಳಕಜೆ, ಜಂಶೀರ್ ಶಾಲೆಕ್ಕರ್, ರಾಫಿ ಶಾಲೆಕ್ಕಾರ್, ಅಶ್ರಫ್ ಗುಂಡಿ ಮತ್ತಿತರರು ಉಪಸ್ಥಿತರಿದ್ದರು.