ಮುಖ್ಯೋಪಾಧ್ಯಾಯಿನಿ ವತ್ಸಲ ಇವರ ಬೀಳ್ಕೊಡುಗೆ ಸಮಾರಂಭ…

ಬಂಟ್ವಾಳ:ದ.ಕ.ಜಿ .ಪ.ಹಿರಿಯ ಪ್ರಾಥಮಿಕ ಶಾಲೆ ಸಜೀಪ ಮೂಡ ಇಲ್ಲಿ ಮುಖ್ಯೋಪಾಧ್ಯಾಯರಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ವತ್ಸಲ ಇವರ ಬೀಳ್ಕೊಡುಗೆ ಸಮಾರಂಭ ಸೆ. 3 ರಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಎನ್ ಬಿ ಅಧ್ಯಕ್ಷತೆಯಲ್ಲಿ ಜರಗಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ವತ್ಸಲ ಟೀಚರ್ ಶಾಲೆಗೆ ನೀಡಿದ ಸೇವೆಯನ್ನು ಸ್ಮರಿಸಿ ನಿವೃತ್ತಿ ಜೀವನ ಸುಖಮಯವಾಗಲಿ ಎಂಬುದಾಗಿ ಶುಭ ಹಾರೈಸಿದರು.
ಸಜೀಪ ಮೂಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ಉಪಾಧ್ಯಕ್ಷ ಸಿದ್ದಿಕ್, ಕೊಳಕೆ ಗ್ರಾಮ ಪಂಚಾಯಿತಿ ಸದಸ್ಯ ಯೋಗೀಶ್ ಬೆಲ್ಚಡ, ಪ್ರಭಾರ ಮುಖ್ಯೋಪಾಧ್ಯಾಯಿನಿ ಜೆಸಿಂತಾ, ಸಿ .ಆರ್.ಪಿ .ಇಂದಿರಾ, ಶಾಂತಿನಗರ ಶಾಲಾ ಮುಖ್ಯೋಪಾಧ್ಯಾಯಿನಿ ಸುಪ್ರಭಾ, ಮಲಾಯಿ ಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಲಿಡ್ ವಿನ್, ಶಿಕ್ಷಕಿಯರಾದ ರೋಹಿಣಿ, ರೇಖಾ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಶಬೀರ್, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅತಿಥಿ ಶಿಕ್ಷಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕಿ ಮಮತಾ ಶೆಟ್ಟಿ, ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಪದ್ಮಿನಿ ಧನ್ಯವಾದ ನೀಡಿದರು.

whatsapp image 2025 09 03 at 3.29.16 pm (1)

Related Articles

Back to top button