ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ – ಮಟ್ಟಾರು ರತ್ನಾಕರ ಹೆಗ್ಡೆ ಭೇಟಿ, ಪರಿಶೀಲನೆ…

ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ, ಸಜಿಪಮೂಡ ಗ್ರಾಮ, ಬಂಟ್ವಾಳ ಇದರ ಮುಂಭಾಗದ ತಡೆಗೋಡೆಯನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸುವ ಸಲುವಾಗಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಂಗಳವಾರದಂದು ದೇವಾಲಯಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜಾ, ಪದಾಧಿಕಾರಿಗಳಾದ ಎನ್ ಸುಬ್ರಹ್ಮಣ್ಯ ಭಟ್, ಯೋಗೇಶ್ ಬೆಳ್ಚಡ, ವಿಶ್ವನಾಥ್ ಕೊಟ್ಟಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ರವಿ ಪಂಬದ ಮೊದಲಾದವರು ಉಪಸ್ಥಿತರಿದ್ದರು.