ಎ.19 – ಸುಳ್ಯ ತಾಲೂಕು ೨ನೇ ತುಳು ಸಾಹಿತ್ಯ ಸಮ್ಮೇಳನ ಮತ್ತು ಕೃಷಿ ಮೇಳ…

ಸುಳ್ಯ: ಸುಳ್ಯ ತಾಲೂಕು ೨ನೇ ತುಳು ಸಾಹಿತ್ಯ ಸಮ್ಮೇಳನ ಮತ್ತು ಕೃಷಿ ಮೇಳ ಎ. 19 ರಂದು ಕಳಂಜದ ಕೋಟೆಮುಂಡುಗಾರು ಶಾಲೆಯಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಒಡಿಯೂರು ಷಷ್ಠ್ಯಬ್ದ ಸಂಭ್ರಮ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ರೈ ಕಳಂಜ ಅವರು ಕಾರ್ಯಕ್ರಮದ ವಿವರ ನೀಡಿದರು.
ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ತಾಲೂಕು ಸಮಿತಿ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಡರ್‌ ತುಳುಕೂಟ ಸುಳ್ಯ, ಕಳಂಜ ಬಾಳಿಲ ಸಹಕಾರಿ ಸಂಘ, ಜ್ಞಾನವಾಹಿನಿ ಪ್ರಾದೇಶಿಕ ಸಮಿತಿ ಸುಳ್ಯ ಇವರ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿರುವುದು.
ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ನಿಂತಿಕಲ್ಲು ಕೆ.ಎಸ್‌.ಜಿ.ಪಿ.ಯು.ಕಾಲೇಜಿನ ಪ್ರಾಂಶುಪಾಲ ಸದಾನಂದ ರೈ
ಕೂವೆಂಜ ವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬಿ. ಸುಭಾಶ್ಚಂದ್ರ ರೈ ತೋಟ ವಹಿಸಲಿದ್ದಾರೆ. ಸಚಿವ ಎಸ್‌.ಅಂಗಾರ ಸಮ್ಮೇಳನ ಉದ್ಘಾಟಿಸುವರು. ಉದ್ಘಾಟನಾ ಸಮಾರಂಭದ ಬಳಿಕ ತುಳು ವಿಚಾರಗೋಷ್ಠಿ, ಕೃಷಿಗೋಷ್ಠಿ, ತುಳು ಸಾಂಸ್ಕೃತಿಕ ಗೌಜಿ ನಡೆಯುವುದು. ಮಧ್ಯಾಹ್ನ ಸಮ್ಮೇಳನದ ಸಮಾರೋಪ ಮತ್ತು ಸನ್ಮಾನ
ನಡೆಯಲಿದ್ದು, ಅಧ್ಯಕ್ಷತೆಯನ್ನು ವಿಶ್ವನಾಥ ರೈ ಕಳಂಜ ವಹಿಸಲಿದ್ದು, ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಸಮ್ಮೇಳನದಲ್ಲಿ ೧೬ ಮಂದಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು. ಕೃಷಿ ಕ್ಷೇತ್ರದಲ್ಲಿ ವೆಂಕಟ್ರಮಣ
ಭಟ್‌ ಪವನ ಮುಂಡುಗಾರು, ಯಕ್ಷಗಾನದಲ್ಲಿ ಕೋಡ್ಲ,ಗಣಪತಿ ಭಟ್‌, ಹೈನುಗಾರಿಕೆಯಲ್ಲಿ ಕೆದಿಲ ನಾರಾಯಣ
ಭಟ್‌, ಶಿಕ್ಷಣ ಕ್ಷೇತ್ರದಲ್ಲಿ ಎಂ.ಪಿ.ಶಿವಮ್ಮ ಪುರುಷೋತ್ತಮ ಗೌಡ ಮಡ್ತಿಲ, ಸ್ಕೌಟ್‌ ಗೈಡ್‌ ನಲ್ಲಿ ಬಾಪೂ ಸಾಹೇಬ್‌ ಸುಳ್ಯ, ಭೂತಾರಾಧನೆಯಲ್ಲಿ ಜಯರಾಮ ಅಜಿಲ, ಧಾರ್ಮಿಕ ಕ್ಷೇತ್ರದಲ್ಲಿ ಧರ್ಮಪಾಲ ಶೇಣಿ, ತುಳು ಲಿಪಿ ಪ್ರಚಾರ ಜಗದೀಶ್‌ ಗೌಡ ಕಲ್ಕಳ, ಸಹಕಾರ ಕ್ಷೇತ್ರದಲ್ಲಿ ಗುರುಪ್ರಸಾದ್‌ ರೈ ಮೊರಂಗಲ್ಲು, ವೈದ್ಯಕೀಯ ಕ್ಷೇತ್ರ ಡಾ.ರಘುರಾಮ ಮಾಣಿಬೆಟ್ಟು, ಚಲನಚಿತ್ರ ಕ್ಷೇತ್ರದಲ್ಲಿ ಕುಮ್ರ ರಘೂನಾಥ ರೈ, ದೇಶಸೇವೆಗಾಗಿ ಸುರೇಶ್‌ ಬಿ. ಅಗಲ್ಪಾಡಿ, ಲಲಿತ ಕಲೆಯಲ್ಲಿ ವಾಸುದೇವ ರೈ ಬೆಳ್ಳಾರೆ,
ಸಮಾಜ ಸೇವೆಗಾಗಿ ಕೇಶವ ದೀಕ್ಷಿತ್‌ ಕೋಟೆಮುಂಡುಗಾರು, ನಾಟಿವೈದ್ಯರಾಗಿ ಗಂಗಾಧರ ಆಚಾರ್ಯ ಮುಂಡುಗಾರು ಹಾಗೂ ಸಂಘಟನೆಯಲ್ಲಿ ಸುಳ್ಯದ ಶಾರದಾಂಬಾ ಸೇವಾ ಸಮಿತಿಗೆ ಗೌರವ ಸಿಗಲಿದೆ. ಸಂಜೆ ಯಕ್ಷರಂಗ ಬೆಳ್ಳಾರೆಯ ಮಕ್ಕಳಿಂದ ಯಕ್ಷಗಾನ ಬಯಲಾಟ ರಾಣಿ ಶಶಿಪ್ರಭೆ ನಡೆಯುವುದು.
ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ತುಡರ್‌ ತುಳು ಕೂಟದ ಅಧ್ಯಕ್ಷ ಜೆ.ಕೆ. ರೈ ಸುಳ್ಯ, ಒಡಿಯೂರು ಶ್ರೀಗಳವರ ಷಷ್ಠ್ಯಬ್ದ
ಸಂಭ್ರಮ ಸಮಿತಿ ತಾಲೂಕು ಕಾರ್ಯಾಧ್ಯಕ್ಷ ಕೆ.ಟಿ. ವಿಶ್ವನಾಥ್‌, ಕಳಂಜ ಬಾಳಿಲ ಸಹಕಾರಿ ಸಂಘದ ಅಧ್ಯಕ್ಷ ಮುಗುಪ್ಪು ಕೂಸಪ್ಪ ಗೌಡ, ಸಮ್ಮೇಳನ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ರೈ ತೋಟ, ಆರ್ಥಿಕ ಸಮಿತಿಯ ಅಧ್ಯಕ್ಷ ಕರುಣಾಕರ ಶೆಟ್ಟಿ ನಾಲ್ಗುತ್ತು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button