ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪ್ಪಾಡಿ – ಶ್ರಮದಾನ….

ಬಂಟ್ವಾಳ: ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪ್ಪಾಡಿ ಸಜಿಪಮೂಡ ಗ್ರಾಮ ಇದರ ಜೀರ್ಣೋದ್ಧಾರದ ಅಂಗವಾಗಿ ಶ್ರೀ ವೀರಾಂಜನೇಯ ಯುವಕ ಸಂಘ ಸಜಿಪನಡು, ಓಂ ಶಕ್ತಿ ಫ್ರೆಂಡ್ಸ್ ಕೊಳಕೆ, ಪದವು ಫ್ರೆಂಡ್ಸ್ ಕಂಚಿನಡ್ಕಪದವು, ತಿರುವಾಲೆ ತಂಡ ಇರಾ, ಸರಸ್ವತಿ ಕಲಾಸಂಘ ಪೆರ್ವ, ಸಜೀಪಮುನ್ನೂರು ಯುವಕ ಸಂಘ ಕಂದೂರು, ವಿದ್ಯಾದಾಯಿನಿ ಸಂಘ ಬೆಂಕ್ಯ, ಶಾರದಾ ಯುವಕ ಸಂಘ ಶಾರದಾ ನಗರ, ಬಜರಂಗದಳ ಆಲಾಡಿ, ಭಗವತಿ ತೀಯಾ ಸಂಘ ಕೂಡೂರು, ನೇತ್ರಾವತಿ ಬಳಗ ಮಂಜಲ್ ಪಾದೆ ಮೊದಲಾದ ಸಂಘ ಸಂಸ್ಥೆಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಬಾಲಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಶವಂತ ದೇರಜೆ, ಎಂ ಸುಬ್ರಹ್ಮಣ್ಯ ಭಟ್, ಶ್ರೀಕಾಂತ್ ಶೆಟ್ಟಿ ಸಂಕೇಶ, ಲಿಂಗಪ್ಪ ದೋಟ, ಸುರೇಶ್ ಬಂಗೇರ, ರಮೇಶ ಅನ್ನಪ್ಪಾಡಿ, ಸತೀಶ್ ಗಟ್ಟಿ, ಬಾಲಕೃಷ್ಣ, ಗಣೇಶ್ ಕುಲಾಲ್, ನರೇಂದ್ರ ಅಳ್ವ, ವಿಶ್ವನಾಥ್ ಬೆಲ್ಚಡ, ಕುಶೇಶ, ಪದ್ಮನಾಭ, ಜಯಪ್ರಕಾಶ್, ದಿನೇಶ, ಅಶೋಕ, ದಿವಾಕರ, ಸುಧಾಕರ, ಮೊದಲಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.