ಸಾಹಿತ್ಯ ಪೋಷಕ ಡಾ.ಕೆ.ವಿ.ದೇವಪ್ಪ ಮಂಗಳೂರುರವರಿಗೆ ಸಮಾಜ ಸೇವಾರತ್ನ ರಾಜ್ಯ ಪ್ರಶಸ್ತಿ…

ಮಂಗಳೂರು: ಪುರಭವನದಲ್ಲಿ ಅ. 29ರಂದು ಪಿ ವಿ ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಪ್ರಕಾಶನದ 16ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯೋತ್ಸವ 2023 ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ರಾಜ್ಯ ಮಾಜಿಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ಸಮಾಜ ಸೇವಕ, ಸಾಹಿತ್ಯ ಪೋಷಕ ಶ್ರೀ ಡಾ .ಕೆ .ವಿ. ದೇವಪ್ಪ ಮಂಗಳೂರು ಇವರಿಗೆ ಕಥಾಬಿಂದು “ಸಮಾಜ ಸೇವಾ ರತ್ನ “ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಉದ್ಘಾಟಕರಾದ ದ. ಕ ಸಹಾಯಕ ಅರಣ್ಯಧಿಕಾರಿಸಾಹಿತ್ಯ ಪೋಷಕ ಶ್ರೀಧರ್ ಕಾಸರಗೋಡು ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಕೆ. ವಾಮನ್ ರಾವ್ ಬೇಕಲ್, ಸುಂದರ್ ಶೆಟ್ಟಿ, ದ. ಕನ್ನಡ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ ಕೊಡಿಯಾಲಬೈಲ್, ಕಥಾಬಿಂದು ಪ್ರಕಾಶಕ ಪ್ರದೀಪ್ ಕುಮಾರ್,ಸಾಹಿತಿ ಜಯಾನಂದ ಪೆರಾಜೆ, ಕವಯತ್ರಿ ರೇಖಾ ಸುದೇಶ್ ರಾವ್, ಸಾಹಿತಿ ಕೋಲ್ಚಪ್ಪೆ ಗೋವಿಂದ ಭಟ್ ಮೊದಲಾದವರಿದ್ದರು.