ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು – ಪೋಷಕರ ಸಭೆ…
ಮಕ್ಕಳ ಕಲಿಕೆಗೆ ಪಿಯುಸಿ ಶಿಕ್ಷಣ ಮಹತ್ವದ ಘಟ್ಟವಾಗಿದೆ - ಕೆ.ಆರ್.ಗಂಗಾಧರ್...

ಸುಳ್ಯ: ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪೋಷಕರ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಸಂಚಾಲಕ ಕೆ. ಆರ್. ಗಂಗಾಧರ್ ಮಾತನಾಡಿ, ಎರಡು ವರ್ಷಗಳ ಪಿಯುಸಿ ಶಿಕ್ಷಣ ಮಕ್ಕಳ ಕಲಿಕೆಯ ಮಹತ್ವದ ಘಟ್ಟವಾಗಿದೆ. ಆದ್ದರಿಂದ ಮಕ್ಕಳ ಕಲಿಕೆಗೆ ಪೋಷಕರು ವಿಶೇಷ ಗಮನ ನೀಡಬೇಕೆಂದು ಮನವಿ ಮಾಡಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಸಭೆಯ ಅಧ್ಯಕ್ಷತೆ ವಹಿಸಿ, ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ನೀಡಿ, ವಿದ್ಯಾರ್ಥಿಗಳ ಪ್ರಗತಿಯಲ್ಲಿ ಪೋಷಕರು ಕೈ ಜೋಡಿಸಲು ಕರೆ ನೀಡಿದರು.
ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮ ಕುಮಾರ್ ಸ್ವಾಗತಿಸಿದರು. ರಸಾಯನಶಾಸ್ತ್ರ ಉಪನ್ಯಾಸಕ ಲಿಂಗಪ್ಪ ಪೂಜಾರಿ ವಂದಿಸಿದರು.ವಿದ್ಯಾರ್ಥಿಗಳಾದ ಶ್ರೇಯಾ,ಅನ್ವತಾ ಮತ್ತು ಚೈತನ್ಯ ಪ್ರಾರ್ಥಿಸಿದರು.ಇತಿಹಾಸ ಉಪನ್ಯಾಸಕ ಮೋಹನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು.ಸಂಸ್ಥೆಯ ಎಲ್ಲಾ ಉಪನ್ಯಾಸಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.