ಬಹುಮಾನ ಹಾಗೂ ಅಂಕಪಟ್ಟಿ ವಿತರಣೆ…

ಬಂಟ್ವಾಳ:ತಾಲೂಕಿನ ದ. ಕ. ಜಿ. ಪಂ. ಹಿ. ಪ್ರಾ.ಶಾಲೆ ಬೊಂಡಾಲ ಇಲ್ಲಿ ಸಂಸ್ಕೃತ ಭಾರತಿ ಮಂಗಳೂರು ಇವರು 2023 -24ರಲ್ಲಿ ಏರ್ಪಡಿಸಿದ್ದ ಸಂಸ್ಕೃತ ಪ್ರಥಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಾಲೆಯ 13 ಮಕ್ಕಳಿಗೆ ಅಂಕಪಟ್ಟಿ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಸಂಸ್ಕೃತ ಭಾರತಿ ಇದರ ಪ್ರಾಂತ ಮುಖ್ಯಸ್ಥರಾದ ಸತ್ಯನಾರಾಯಣ, ಕಾರ್ಯಕರ್ತರಾದ ಕೃಷ್ಣರಾಜ್, ಸಂಸ್ಕೃತ ಅಧ್ಯಾಪಕರಾದ ದೇವರಾಜ್ ಆಚಾರ್ಯ ಭಾಗವಹಿಸಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ರೇಖಾ ಸಿ ಎಚ್ ಕಾರ್ಯಕ್ರಮದ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಬಹುಮಾನಿತರ ಪಟ್ಟಿ ವಾಚಿಸಿ, ಭವ್ಯ ವಂದಿಸಿ, ಶಿಕ್ಷಕಿ ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ಕಿಶೋರಿ ಸಹಕರಿಸಿದರು.