ವಿಧಾನ ಪರಿಷತ್ ಸದಸ್ಯ ನಸೀರ್ ಅಹಮ್ಮದ್ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ. 5 ಲಕ್ಷ ಅನುದಾನ ಬಿಡುಗಡೆ…
ಸುಳ್ಯ: ಸಂಪಾಜೆ ಗ್ರಾಮಕ್ಕೆ ಮುಖ್ಯ ಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮ್ಮದ್ ಅವರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಸುಳ್ಯ ತಾಲೂಕು ಪೇರಡ್ಕ-ಗೂನಡ್ಕ ವಲಿಯುಲ್ಲಾಹಿ ದರ್ಗಾ ಶರೀಪ್ ಬಳಿ ರೂ.2 ಲಕ್ಷ, ಮುಹಿಯದ್ದೀನ್ ಜುಮಾ ಮಸೀದಿ ಪೇರಡ್ಕ ಗೂನಡ್ಕ ಬಳಿ ರೂ. 1 ಲಕ್ಷ, ಕಲ್ಲುಗುಂಡಿ ಮುಹಿದ್ದೀನ್ ಜುಮಾ ಮಸೀದಿ ಬಳಿ ರೂ. 1 ಲಕ್ಷ, ಸಂಪಾಜೆ ಬದ್ರ್ ಜುಮಾ ಮಸೀದಿಯ ಮುಂಬಾಗದಲ್ಲಿ ಹೈಮಾಸ್ಟ್ ದೀಪ ಅಳವಡಿಸಲು ರೂ. 1 ಲಕ್ಷ,ಹೀಗೆ ಒಟ್ಟು ರೂ. 5 ಲಕ್ಷ ಅನುದಾನ ಬಿಡುಗಡೆಗೊಂಡಿರುತ್ತದೆ.
ಅನುದಾನ ಬಿಡುಗಡೆಗಾಗಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಪೇರಡ್ಕ ಗೂನಡ್ಕ ಮುಹಿದ್ದೀನ್ ರಿಫಾಯಿ ದಫ್ ಎಸೋಸಿಯೇಶನ್ ಅಧ್ಯಕ್ಷರಾದ ಜಿ.ಕೆ ಹಮೀದ್ ಗೂನಡ್ಕ ಮತ್ತು ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಕೆ ಹನೀಫ್ ಸಂಪಾಜೆರವರು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹಾಗು ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷ ಟಿ. ಎಂ ಶಹೀದ್ ತೆಕ್ಕಿಲ್ ರವರಿಗೆ ಮನವಿ ಮಾಡಿದ್ದರು. ಟಿ ಎಂ ಶಾಹಿದ್ ತೆಕ್ಕಿಲ್ ಅವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಆದೇಶದ ಮೇರೆಗೆ ಹಣ ಮಂಗಳೂರು ಜಿಲ್ಲಾಧಿಕಾರಿಯವರಿಗೆ ಬಿಡುಗಡೆಗೊಂಡಿರುತ್ತದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ರವರು ಸಂಪಾಜೆ ಗ್ರಾಮಕ್ಕೆ ಅಂಗನವಾಡಿ ಕಟ್ಟಡಕ್ಕೆ 5 ಲಕ್ಷ ನೀಡಿದ್ದು, ಪುನಃ 5 ಲಕ್ಷ ಸಂಪಾಜೆ ಗ್ರಾಮಕ್ಕೆ ನೀಡಿದ್ದು, ಅವರನ್ನು ಮತ್ತು ಸಹಕರಿಸಿದ ಊರಿನ ಅಭಿವೃದ್ಧಿಗೆ ಪಣ ತೊಟ್ಟಿರುವ ಟಿ ಎಂ ಶಾಹಿದ್ ತೆಕ್ಕಿಲ್ಅ ವರನ್ನು ಜಿ ಕೆ ಹಮೀದ್ ಗೂನಡ್ಕ ಅಭಿನಂದಿಸಿದ್ದಾರೆ.
ಸಂಪಾಜೆ ಗ್ರಾಮದ ಉಳಿದ ಮಸೀದಿ, ಮದರಸ, ದೈವಸ್ಥಾನ, ಭಜನಾ ಮಂದಿರ, ಚರ್ಚ್ ಗಳಿಗೆ ಹಣ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಜಿ ಕೆ ಗೂನಡ್ಕ ತಿಳಿಸಿದ್ದಾರೆ.