ಸುದ್ದಿ

ಕೀಲಾರು ಶಿಕ್ಷಕರ ನಿಧಿ- ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಯಶೋಧಾ ಎಂ. ಎಸ್. ಹಾಗೂ ಶ್ರೀಮತಿ ಪಾರ್ವತಿ ಎಂ. ರವರಿಗೆ ಗೌರವಾರ್ಪಣೆ…

ಸುಳ್ಯ: ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಸೆ. 17ರಂದು ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ‘ಕೀಲಾರು ಶಿಕ್ಷಕರ ನಿಧಿ’ ವತಿಯಿಂದ ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಯಶೋಧಾ ಎಂ. ಎಸ್. ಹಾಗೂ ಶ್ರೀಮತಿ ಪಾರ್ವತಿ ಎಂ. ರವರಿಗೆ ಸನ್ಮಾನ ಸಮಾರಂಭ ನಡೆಸಲಾಯಿತು.
ಸಂಪಾಜೆ ಎಜ್ಯುಕೇಶನಲ್ ಸೊಸೈಟಿ ಸಂಚಾಲಕರಾದ ಎಂ. ಶಂಕರನಾರಾಯಣ ಭಟ್ ರವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಮಾಲತಿ ಯವರು ಸ್ವಾಗತಿಸಿದರು. ಮುಖ್ಯಶಿಕ್ಷಕರಾದ ಶ್ರೀ ಐತಪ್ಪ ರವರು ಅಭಿನಂದನಾ ಮಾತುಗಳನ್ನಾಡಿದರು. ಶ್ರೀ ನಾರಾಯಣ ಭಟ್ ಕೊಂದಲಕಾಡು ಶುಭಹಾರೈಸಿದರು. ಶ್ರೀ ಕೆ. ಯು. ರಂಜಿತ್ ಉಪಸ್ಥಿತರಿದ್ದರು. ಶಿಕ್ಷಕರಾದ ಶ್ರೀ ಕುಮಾರ್ ಹೆಚ್. ಜಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

Related Articles

Back to top button