ಸಾಮಾಜಿಕ ಧುರೀಣ ಟಿ.ಎಮ್.ಶಹೀದ್ ರವರ ಹುಟ್ಟು ಹಬ್ಬದ ಸುವರ್ಣ ಸಂಭ್ರಮ ಕಾರ್ಯಕ್ರಮ…
ಸುಳ್ಯ :ರಾಜಕೀಯ, ಧಾರ್ಮಿಕ, ಸಾಮಾಜಿಕ,, ಶೈಕ್ಷಣಿಕ, ಸಹಕಾರಿ, ಕ್ರೀಡಾ ಹಾಗೂ ಕೃಷಿ ಕ್ಷೇತ್ರದಲ್ಲಿ 3 ದಶಕದಿಂದ ಕ್ರಿಯಾಶೀಲರಾಗಿರುವ ಅರಂತೋಡು ಟಿ.ಎಮ್.ಶಹೀದ್ ರವರ ಹುಟ್ಟು ಹಬ್ಬದ ಸುವರ್ಣ ಸಂಭ್ರಮ ಕ್ಕೆ ಜ.21 ರಂದು ತೆಕ್ಕಿಲ್ ನಿವಾಸದಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಯಿತು.
ಧಾರ್ಮಿಕ ಕಾರ್ಯಕ್ರಮ ವನ್ನು ಸ್ಥಳೀಯ ಮಸೀದಿ ಖತೀಬರಾದ ಬಹು ಅಲ್ಹಾಜ್ ಇಸ್ಹಾಖ್ ಬಾಖವಿ ನೇರವೆರಿಸಿದರು.ಪೇರಡ್ಕ ಮಸೀದಿ ಖತೀಬರಾದ ಸುಹೇಲ್ ದಾರಿಮಿ ,ನವಾಝ್ ದಾರಿಮಿ ,ಝಕರಿಯಾ ಮುಸ್ಲಿಯಾರ್ ಆರ್ಕಾನ,ನವಾಜ್ ದಾರಿಮಿ, ಭಾಗವಹಿಸಿದರು.
ಸುವರ್ಣ ಸಂಭ್ರಮದ ಅಧ್ಯಕ್ಷರಾದ ಸದಾನಂದ ಮಾವಜಿ,ಕರುಣ್ ಅಡ್ಪಂಗಾಯ,ಪ್ರಧಾನ ಕಾರ್ಯದರ್ಶಿ ಕೆ.ಟಿ.ವಿಶ್ವನಾಥ ,ಪರಶುರಾಮ ಚಿಲ್ತಡ್ಕ,ಸಂತೋಷ್ ಕುತ್ತಮೊಟ್ಟೆ,ದಯಾನಂದ ಕುರುಂಜಿ, ಟಿ.ಎಮ್.ಬಾಬಾ ಹಾಜಿ,ಅಶ್ರಫ್ ಗುಂಡಿ,ತಾಜ್ ಮಹಮದ್ ಸಂಪಾಜೆ,ಅಬ್ಬಾಸ್ ಸಂಟ್ಯಾರ್,ಹಾಜಿ ಅಬ್ದುಲ್ ಖಾದರ್ ಪಠೇಲ್,ಹಾಜಿ ಮಹಮ್ಮದ್ ,ಹಾಜಿ ರಝಾಕ್ ಮೊಟ್ಟಂಗಾರ್,ಹಾಜಿ ಕೆ.ಎಮ್.ಮಹಮ್ಮದ್ ,ಟಿ.ಎಮ್.ಜಾವೇದ್ ತೆಕ್ಕಿಲ್,ಅಬೂಬಕ್ಕರ್ ಪಾರೆಕ್ಕಲ್, ಮಜೀದ್ ಸಿಟಿ ಮೆಡಿಕಲ್ಸ್ ,ಹನೀಫ್,ಮೂಸಾನ್ ಈ ಸಂದರ್ಭದಲ್ಲಿ ಇದ್ದರು.
ನಂತರ ತೆಕ್ಕಿಲ್ ಶಾಲೆಗೆ ಭೇಟಿ ನೀಡಿದ ಶಹೀದ್ ರವರಿಗೆ ಶಾಲಾ ಪರವಾಗಿ ಸ್ವಾಗತಿಸಿ ಸಭಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸುವರ್ಣ ಸಂಭ್ರಮದ ಅಧ್ಯಕ್ಷ ರಾದ ಸದಾನಂದ ಮಾವಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರು ಹಾಗೂ ಮಕ್ಕಳು ಶಹೀದ್ ರವರಿಗೆ ಶುಭಾಶಯ ಕೋರಿದರು. ಸಮಾರಂಭದಲ್ಲಿ ಪರಶುರಾಮ ಚಿಲ್ತಡ್ಕ,ದಿನಕರ ಸಣ್ಣ ಮನೆ,ಮುಸ್ತಫಾ ಸುಳ್ಯ ,ಸಿದ್ದೀಕ್ ಕೊಕ್ಕೊ,ರಿಯಾಝ್ ಸುಳ್ಯ , ತಾಜ್ ಮಹಮದ್ ,ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾದ ಜಿ.ಕೆ. ಹಮೀದ್. ಕೆ.ಆರ್.ಜಗದೀಶ್ ರೈ,ಲಿಸ್ಸಿ ಮೊನಾಲಿಸಾ,ಎಸ್.ಕೆ.ಹನೀಫ್,ಹಂಸ ಕಲ್ಲುಗುಂಡಿ, ಶಾಲಾ ಮುಖ್ಯೋಪಾಧ್ಯಾಯಿನಿ ಶೀಮತಿ ವಾಣಿ,ಮುಂತಾದವರು ಉಪಸ್ಥಿತರಿದ್ದರು .ಅಶ್ರಫ್ ಗುಂಡಿ ಸ್ವಾಗತಿಸಿ, ವಂದಿಸಿದರು.