ರಾಯಿ ಗ್ರಾ.ಪಂ.ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ…
ಬಂಟ್ವಾಳ: ಕಳೆದ ಎರಡು ವರ್ಷದ ಅವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ರಾಯಿ ಗ್ರಾ.ಪಂ. ವ್ಯಾಪ್ತಿಯಲ್ಲಿ 5 ಕೋಟಿ 22ಲಕ್ಷದ 60 ಸಾವಿರ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಹೇಳಿದರು.
ಅವರು ಗುರುವಾರ ರಾಯಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 2.71 ಕೋ.ರೂ ವೆಚ್ಚದಲ್ಲಿ ಸೇತುವೆ ಹಾಗೂ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ರಾಯಿ,ಕೊಯಿಲ ಗ್ರಾಮಗಳಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳ ಬೇಡಿಕೆ ಇದೆ. ಗ್ರಾ.ಪಂ. ಚುನಾವಣೆ ಬಳಿಕ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು ಎಂದರು.
ಶಿಲಾನ್ಯಾಸ: ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅನುದಾನದಲ್ಲಿ ಜಿಲ್ಲಾ ಮುಖ್ಯ ರಸ್ತೆ, ಸೇತುವೆಗಳು ಯೋಜನೆಯಲ್ಲಿ ತಲಾ 75 ಲಕ್ಷ ರೂ.ವೆಚ್ಚದಲ್ಲಿ ರಾಯಿ ಗ್ರಾಮದ ರಾಯಿ-ಹೋರಂಗಳ-ಕರ್ಪೆ ಗ್ರಾಮೀಣ ರಸ್ತೆಯ ಲಕ್ಷ್ಮಿಕೋಡಿಯಲ್ಲಿ ಮತ್ತು ರಾಯಿ-ದಡ್ಡು ಗ್ರಾಮೀಣ ರಸ್ತೆಯ ಸಾಲುಕೋಡಿಯಲ್ಲಿ ಸೇತುವೆ ನಿರ್ಮಾಣ, 7ಲ.ರೂ ವೆಚ್ಚದ ಕೊಯಿಲ ಗ್ರಾಮದ ಪೂಜಾರ್‍ತೋಡಿ-ಬೊಲ್ಲೋಡಿ ರಸ್ತೆ, 4 .90 ಲ.ರೂ ವೆಚ್ಚದ ಬದನಡಿ-ಬೊಲ್ಪೊಟ್ಟು ರಸ್ತೆ,೫ ಲ.ರೂ ವೆಚ್ಚದ ಅಂತರ-ಬುರಾಲ್ ರಸ್ತೆ, 5 ಲ.ರೂ ವೆಚ್ಚದ ಬದನಡಿ-ಗಾಣದಕೊಟ್ಯ ರಸ್ತೆ, 6 ಲ.ರೂ ವೆಚ್ಚದ ಅಮ್ಯಾಲ ಎಸ್‌ಸಿ ಕಾಲನಿ, 6 ಲ.ರೂ ವೆಚ್ಚದ ಅಮ್ಯಾಲ ರಸ್ತೆ, 5 ಲ.ರೂ ವೆಚ್ಚದ ಕೊಲ -ಪಾಂಡವರ ಗುಡ್ಡೆ ರಸ್ತೆ, 5 ಲ.ರೂ ವೆಚ್ಚದ ಕೊಲ-ಕೋಡಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು.
ಉದ್ಘಾಟನೆ: 30 ಲ.ರೂ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಂಡ ಕೊಲ ಗ್ರಾಮದ ಪರಾರಿ ರಸ್ತೆ, 15 ಲ.ರೂ ವೆಚ್ಚದ ಪಿಲ್ಕಾಜೆ ರಸ್ತೆ, 5 ಲ.ರೂ ವೆಚ್ಚದ ಅಂತರ ರಸ್ತೆ, 5 ಲ.ರೂ ವೆಚ್ಚದ ಗೋವಿಂದಬೆಟ್ಟು ರಸ್ತೆ, 3 ಲ.ರೂ ವೆಚ್ಚದ ಕೊಲ ಸ.ಪ್ರೌ.ಶಾಲೆ ರಸ್ತೆ ಗಳನ್ನು ಶಾಸಕರು ಉದ್ಘಾಟಿಸಿದರು.
ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರ.ಕಾರ್ಯದರ್ಶಿ ಡೊಂಬಯ್ಯ ಅರಳ, ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ತಾ.ಪಂ. ಮಾಜಿ ಸದಸ್ಯರಾದ ವಸಂತ ಕುಮಾರ್ ಅಣ್ಣಳಿಕೆ, ರತ್ನಕುಮಾರ್ ಚೌಟ, ರಾಯಿ ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ದಯಾನಂದ ಸಫಲ್ಯ, ನಿಕಟಪೂರ್ವ ಉಪಾಧ್ಯಕ್ಷೆ ಪುಷ್ಪಲತಾ ಎಸ್.ಆರ್., ನಿಕಟಪೂರ್ವ ಸದಸ್ಯರಾದ ಹರೀಶ್ ಆಚಾರ್ಯ, ಪದ್ಮನಾಭ ಗೌಡ, ರಾಘವ ಅಮೀನ್, ಪ್ರಮುಖರಾದ ರಮಾನಾಥ ರಾಯಿ, ಸೀತಾರಾಮ ಪೂಜಾರಿ, ರಶ್ಮಿತ್ ಶೆಟ್ಟಿ ಕೈತ್ರೋಡಿ, ಚಿದಾನಂದ ರೈ, ಪುರುಷೋತ್ತಮ ಶೆಟ್ಟಿ ವಾಮದಪದವು,ದಿನೇಶ್ ಶೆಟ್ಟಿ ದಂಬೆದಾರ್, ಸಂತೋಷ ರಾಯಿಬೆಟ್ಟು, ಪರಮೇಶ್ವರ ಪೂಜಾರಿ ರಾಯಿ, ಎಂ.ಪಿ. ದಿನೇಶ್ ಮೈಂದಬೆಟ್ಟು,ಶಿವಪ್ರಸಾದ್ ಲಕ್ಷ್ಮಣಕೋಡಿ, ವಸಂತ ಗೌಡ ಮುದ್ದಾಜೆ, ಪುರುಷೋತ್ತಮ ಅಂಚನ್, ಗಂಗಾಧರ ಪೂಜಾರಿ ಪಿಲ್ಕಾಜೆ, ಚೇತನ್ ಕೊಲ, ರಾಜೇಶ್ ರಾಯಿ, ರವೀಂದ್ರ ಪೂಜಾರಿ, ಶ್ಯಾಮ್ ಪ್ರಸಾದ್ ರಾವ್, ಯಶೋಧರ ನಾಯ್ಕ, ನವೀನ್ ಸಾಲುಕೋಡಿ, ಸಂತೋಷ್ ಗೌಡ,ಅಭಿಯಂತರರಾದ ಷಣ್ಮುಗಂ, ಅರುಣ್ ಪ್ರಕಾಶ್, ಅಮೃತ್ ಕುಮಾರ್ ಮತ್ತಿತರರಿದ್ದರು.