ವಿವಿಧ ಕಾಮಗಾರಿಗಳಿಗೆ ಅನುದಾನ ದೊರಕಿಸಿಕೊಡುವಂತೆ ಟಿ ಎಂ ಶಾಹಿದ್ ತೆಕ್ಕಿಲ್ ರವರಿಗೆ ಮನವಿ…
ಸುಳ್ಯ: ಸಂಪಾಜೆ ಗ್ರಾಮದ ಗೂನಡ್ಕ ಆಯುಷ್ಮಾನ ಅರೋಗ್ಯ ಕೇಂದ್ರದ ಮುಂಭಾಗ ಇಂಟರ್ ಲಾಕ್ ಅಳವಡಿಕೆ, ಆವರಣ ಗೋಡೆ ವಿಸ್ತರಣೆ ಹಾಗೂ ಎತ್ತರಗೊಳಿಸುವಿಕೆ ಕಾಮಗಾರಿಗೆ ಅನುದಾನ ದೊರಕಿಸಿಕೊಡುವಂತೆ ಕರ್ನಾಟಕ ಸರ್ಕಾರದ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ರವರಿಗೆ ಕಮ್ಯೂನಿಟ್ ಹೆಲ್ತ್ ಅಧಿಕಾರಿ ಹರ್ಷಿತ ಹಾಗೂ ಅಂಗನವಾಡಿ ಕಾರ್ಯಕರ್ತೆ ಶಾರದಾ ಹಾಗೂ ಆಶಾ ಕಾರ್ಯಕರ್ತೆ ಆಶಾ ವಿನಯ್ ಕುಮಾರ್ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು, ವಾರ್ಡ್ ಸದಸ್ಯರಾದ ಪಿ. ಕೆ. ಅಬುಸಾಲಿ ಗೂನಡ್ಕ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಜಿ ಕೆ ಹಮೀದ್ ಗೂನಡ್ಕ, ಪಂಚಾಯತ್ ಸದಸ್ಯರಾದ ವಿಮಲಾ ಪ್ರಸಾದ್, ಸ್ಥಳೀಯರಾದ ಮಧುಸೂದನ, ಟಿ ಎ. ರಾಫಿಹ್, ಅಂಗನವಾಡಿ ಸಹಾಯಕಿ ರೋಹಿಣಿ ಉಪಸ್ಥಿತರಿದ್ದರು.





