ಆದಿದ್ರಾವಿಡ ಯುವ ವೇದಿಕೆ ಸದಸ್ಯರಿಂದ ಶ್ರಮದಾನ…

ಸುಳ್ಯ: ಸುಳ್ಯ ತಾಲೂಕು ಕೊಡಿಯಾಲ ಗ್ರಾಮದ ಬೇರ್ಯಾ ಕಾಲನಿಯಲ್ಲಿ ಕೊಡಿಯಾಲ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ ಕುಡಿಯುವ ನೀರಿನ ಟ್ಯಾಂಕ್ ನ್ನು ಊರಿನ ಎಲ್ಲ ಯುವಕರು ಶ್ರಮದಾನ ನಡೆಸಿ ಸ್ವಚ್ಛಗೊಳಿಸಿದರು.
ಆದಿದ್ರಾವಿಡ ಯುವ ವೇದಿಕೆಯ ಸದಸ್ಯರಾದ ದಾಮೋದರ್ ಬೇರ್ಯಾ ಹಾಗೂ ಸುಂದರ್ ಬೇರ್ಯಾ ಇವರ ನೇತೃತ್ವದಲ್ಲಿ ಶ್ರಮದಾನ ನಡೆಯಿತು.ಅಲ್ಲದೇ ಮಳೆಗಾಲದಲ್ಲಿ ರಸ್ತೆಯ ಮೇಲೆ ರಭಸವಾಗಿ ಹರಿಯುವ ನೀರನ್ನು ಚರಂಡಿ ಮಾಡಿ ರಸ್ತೆ ಬದಿಯಲ್ಲಿ ಹರಿಯುವಂತೆ ಮಾಡಲಾಯಿತು. ಜೊತೆಗೆ ರಸ್ತೆಯ ಎರಡು ಬದಿಗಳಲ್ಲಿ ಭಾಗಿಕೊಂಡಿರುವ ಗಿಡಗಳ ರೆಂಬೆಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ತಿಮ್ಮಪ್ಪ ,ದಾಮೋದರ ,ಸುಂದರ, ಸುರೇಶ್,ರಾಕೇಶ್,ದಿತೀನ್, ಶೀನಪ್ಪ, ಯತೀಶ್ ಹಾಗೂ ಕಾಲನಿಯ ಹಿರಿಯರಾದ ಬಿಯಲು ಸಹಕರಿಸಿದರು.