ಕೋವಿಡ್ ಪಾಸಿಟಿವ್ ವ್ಯಕ್ತಿಯ ಸಂಪರ್ಕ ಇದ್ದವರನ್ನು ಮಾತ್ರ ಆರೋಗ್ಯ ಇಲಾಖೆ ನಿರ್ಬಂಧಿಸಲಿ- ರಿಯಾಜ್ ಕಟ್ಟೆಕಾರ್…
ಸುಳ್ಯ: ಕೋವಿಡ್ ಪಾಸಿಟಿವ್ ಆದ ವ್ಯಕ್ತಿಯ ಸಂಪರ್ಕದಲ್ಲಿ ಇದ್ದವರಿಗೆ ಮಾತ್ರ ಕ್ವಾರಂಟೈನ್ ವಿಧಿಸಬೇಕು. ಅದು ಬಿಟ್ಟು ಆರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪಾಸಿಟಿವ್ ಬಂದ ವ್ಯಕ್ತಿಯ ಅಕ್ಕಪಕ್ಕದ ಮನೆಯವರ ಫೋಟೋಗಳನ್ನು ತೆಗೆದು ಮಾನಸಿಕವಾಗಿ ಅವರನ್ನು ಹಿಂಸಿಸುವುದು ಸರಿಯಲ್ಲ. ಪಾಸಿಟಿವ್ ರಿಪೋರ್ಟ್ ಬಂದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದವರನ್ನು ಮಾತ್ರ ಕ್ವಾರಂಟೈನ್ ಗೆ ಒಳಪಡಿಸಿ ಎಂದು ಸುಳ್ಯ ನ ಪಂ ಸದಸ್ಯ ರಿಯಾಜ್ ಕಟ್ಟೆಕ್ಕಾರ್ ಒತ್ತಾಯಿಸಿದ್ದಾರೆ.
ಈ ಕಾರ್ಯದಿಂದ ಜನರು ಇನ್ನೂ ಹೆಚ್ಚು ಭಯಭೀತರಾಗಿದ್ದಾರೆ. ಹಾಗೂ ಕೆಲವರಿಗೆ ಪ್ರಾಥಮಿಕ ಸಂಪರ್ಕಿತರು ಎಂದು ನಮೂದಾಗಿರುವ ವಿಷಯವೇ ಗೊತ್ತಿರುವದಿಲ್ಲ. ಆಗ ನಮಗೆ ಫೋಟೋ ತೆಗೆಯೋದು ಕಷ್ಟ ಆಗುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ಹಾಗೂ ಕೋವಿಡ್ ಡ್ಯೂಟಿಯಲ್ಲಿರುವ ಅಧಿಕಾರಿಗಳು ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಾರೆ ಎಂದೂ ರಿಯಾಜ್ ತಿಳಿಸಿದ್ದಾರೆ.