ಅರಂತೋಡು- ಪಟೇಲ್ ಅಹಮ್ಮದ್ ಕುಂಞಿ ಹಾಜಿ ನಿಧನ…
ಸುಳ್ಯ : ಅರಂತೋಡು ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರೂ, ಅರಂತೋಡು ನೆಹರು ಸ್ಮಾರಕ ಪಿ.ಯು.ಕಾಲೇಜಿನ ಪಾಪ್ಯುಲರ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ, ಅರಂತೋಡು ಅನ್ವಾರುಲ್ ಹುದಾ ಎಸೋಸಿಯೇಷನ್ (ನೋಂ)ಇದರ ಸ್ಥಾಪಕ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಅರಂತೋಡು ಪಂಚಾಯತ್ ಸದಸ್ಯರಾಗಿ,ಹಳೆಯ ಕಾಲದ ವ್ಯಾಪಾರಿಯಾಗಿ ಸುದೀರ್ಘ ಕಾಲ ಸೇವೆಗೈದಿರುವ ಅಹಮದ್ ಕುಂಞಿ ಹಾಜಿ ಪಟೇಲ್ ಅರಂತೋಡು (77)ಇಂದು ನಿಧನರಾದರು. ಅಹಮ್ಮದ್ ಕುಂಞ ಪಟೇಲ್ ರವರು ಅನಾರೋಗ್ಯದಿಂದ ಇದ್ದು ಇಂದು ಬೆಳಿಗ್ಗೆ 06:30 ರ ಸಮಯದಲ್ಲಿ ಅವರ ಅರಂತೋಡು ಪಟೇಲ್ ಮನೆಯಲ್ಲಿ ನಿಧನರಾದರು.
ಇವರ ಅಜ್ಜ ದಿವಂಗತ ಪಟೇಲ್ ಅಹಮ್ಮದ್ ಕುಂಞಿ ಹಾಜಿ ಯವರು ಅರಂತೋಡಿನ ಪಟೇಲರಾಗಿದ್ದರು.
ಅವರು ಮನೆಯವರಾದ ಅರಂತೋಡು ನಿವಾಸಿಯಾಗಿರುವ ಬದ್ರುದ್ದೀನ್ ಪಟೇಲ್ , ನಾಸೀರುದ್ದೀನ್ ಪಟೇಲ್ , ಸೈಫುದ್ದೀನ್ ಪಟೇಲ್, ಹಬೀಬ್ ಪಟೇಲ್ ರಹಿಮಾನ್ ಪಟೇಲ್ , ಸಲಾಹುದ್ದೀನ್ ಪಟೇಲ್ , ಜಲಾಲುದ್ದೀನ್ ಪಟೇಲ್ ಮತ್ತು ಮರ್ಹೂಮ್ ಅಮೀನ್ ಪಟೇಲ್ , ಮರ್ಹೂಮ್ ಶಿಹಾಬ್ ಪಟೇಲ್, ಪುತ್ರಿಯರು ಹಸೀನಾ , ಫರೀದ, ವಹೀದ, ಸಮೀಮ, ತಂದೆ ಅಬ್ಬಾಸ್ ಪಟೇಲ್, ಸಹೋದರರು ಅಬ್ದುಲ್ ರಹ್ಮಾನ್ ಪಟೇಲ್, ಅಬ್ದುಲ್ ಖಾದರ್ ಪಟೇಲ್, ಶರೀಫ್ ಪಟೇಲ್, ಸಹೋದರಿಯರು ಖದೀಜ ಪಟೇಲ್ ಅರಂತೋಡು , ಹಾಜಿರಾ ಪಟೇಲ್ ಬೆಳ್ಳಾರೆ ಸಹಿತ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ,ತೆಕ್ಕಿಲ್ ಪ್ರತಿಷ್ಟಾನದ ಅಧ್ಯಕ್ಷರಾದ ಪಟೇಲ್ ಟಿ ಎಂ ಶಾಹಿದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.