ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – YEN CHESS -WIZ ಅಂತರ ಜಿಲ್ಲಾ ರಾಪಿಡ್ ಚೆಸ್ ಪಂದ್ಯಾವಳಿ…
ಮೂಡುಬಿದ್ರಿ: ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್‌ನ ಸಹಯೋಗದಲ್ಲಿ ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಂಗಳೂರು ಮತ್ತು ಕಾಸರಗೋಡು ಜಿಲ್ಲೆಗಳಿಗಾಗಿ 2 ನೇ YEN CHESS -WIZ ಅಂತರ ಜಿಲ್ಲಾ ರಾಪಿಡ್ ಚೆಸ್ ಪಂದ್ಯಾವಳಿ 2022 ಅನ್ನು ಆಯೋಜಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಉಪಾಧ್ಯಕ್ಷರಾದ ಶ್ರೀ ಉಮಾನಾಥ್ ಕಾಪು ಹಾಗೂ ಸಿದ್ಧಿವಿನಾಯಕ ಚೆಸ್ ಅಕಾಡೆಮಿಯ ಶ್ರೀ ಬಾಬು ಪೂಜಾರಿ ಅವರು ದೀಪ ಬೆಳಗಿಸಿ, ಚೆಸ್ ಬೋರ್ಡ್ ಮೇಲೆ ಮೊದಲ ಚಾಲನೆ ಮಾಡುವುದರು ಮೂಲಕ ಪಂದ್ಯಾವಳಿಯನ್ನು ಉದ್ಘಾಟಿಸಿದರು.
ಪ್ರಾಂಶುಪಾಲ ಡಾ.ಆರ್.ಜಿ.ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. ಅಂಡರ್ – 7, ಅಂಡರ್ – 9, ಅಂಡರ್ – 11, ಅಂಡರ್ – 13 ಮತ್ತು ಅಂಡರ್ – 18 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. 120 ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಪಂದ್ಯಾವಳಿಯ ಮುಖ್ಯ ತೀರ್ಪುಗಾರರಾದ ಶ್ರೀ ಸಾಕ್ಷಾತ್, ಶ್ರೀಮತಿ ಸೌಂದರ್ಯ ಯು.ಕೆ , ಕಾಲೇಜಿನ ಕ್ರೀಡಾ ಸಮಿತಿಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಕೀತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.