ಫೆ.10 – ಸಂಪಾಜೆ ಕಾಲೇಜಿನಲ್ಲಿ ಕೃಷಿ ಆಧಾರಿತ ಕೌಶಲ್ಯಗಳ ಮಾಹಿತಿ ಕಾರ್ಯಾಗಾರ…
ಸುಳ್ಯ: ಕೇಂದ್ರೀಯ ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯಗಳ ಸಂಶೋಧನಾ ಸಂಸ್ಥೆ ಬೆಂಗಳೂರು, ಭಾರತ ಸರಕಾರ (CIMAP) ಸಹಯೋಗದೊಂದಿಗೆ ಕೃಷಿ ಆಧಾರಿತ ಕೌಶಲ್ಯಗಳ ತರಬೇತಿ ಕೇಂದ್ರದ ಉದ್ಘಾಟನೆ ಮತ್ತು ಮಾಹಿತಿ ಕಾರ್ಯಾಗಾರ ಫೆ.10 ರಂದು ಸಂಪಾಜೆ ಕಾಲೇಜಿನಲ್ಲಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ವಿಜ್ಞಾನಿಗಳಾದ ಡಾ. ದಿನೇಶ್ ಎ ನಾಗೇಗೌಡ, ಡಾ. ಚೆನ್ನಯ್ಯ ಹಿರೇಮಠ್, ಡಾ. ಎನ್ ಡಿ ಯೋಗೇಂದ್ರ, ಭಾಸ್ಕರನ್, ಜಿ ಎನ್ ಜಯಚಂದ್, ವಿಶೇಷ ಆಹ್ವಾನಿತರಾಗಿ ನಬಾರ್ಡ್ ಸಂಸ್ಥೆಯ ರಮೇಶ್ ಬಿ. ವಿ. ಸಹಿತ ಅನೇಕ ಗಣ್ಯರು ಆಗಮಿಸಲಿದ್ದಾರೆ. ಆಸಕ್ತರಿಗೆ ಇದೊಂದು ಉತ್ತಮ ಅವಕಾಶ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬಹುದು.