ಗೂನಡ್ಕ ಪೇರಡ್ಕ ಮೋಹಿಯದ್ದಿನ್ ಜುಮಾ ಮಸ್ಜಿದ್- ಆವರಣ ಗೋಡೆಯ ಉದ್ಘಾಟನೆ…

ಸುಳ್ಯ :ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ಮೋಹಿಯದ್ದಿನ್ ಜುಮಾ ಮಸ್ಜಿದ್ ಇದಕ್ಕೆ ಟಿ ಎಂ ಶಾಹೀದ್ ತೆಕ್ಕಿಲ್ ರವರ ಶಿಫಾರಸ್ಸಿನ ಮೇರೆಗೆ ವಕ್ಫ್ ನಿಂದ ಬಿಡುಗಡೆಗೊಂಡ ಹಣದಲ್ಲಿ ನಿರ್ಮಿಸಿದ ಮಸೀದಿಯ ಸ್ಥಳಕ್ಕೆ ಸುಮಾರು 28 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಆವರಣ ಗೋಡೆಯ ಉದ್ಘಾಟನೆಯನ್ನು ಕೆಪಿಸಿಸಿ ಕಾರ್ಯಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್ ಉದ್ಘಾಟಿಸಿದರು.
ಮಸೀದಿಯ ಗೌರವರಾಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಬಿ ಕೆ ಹರಿಪ್ರಸಾದ್ , ಸರಕಾರದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ ಎಸ್ ಪೊನ್ನಣ್ಣ, ಜಿ ಕೆ ಹಮೀದ್ ಗೂನಡ್ಕ ,ಧರ್ಮಜ ಉತ್ತಪ್ಪ, ಮಾಜಿ ಆಧ್ಯಕ್ಷರು ಮಸೀದಿಗೆ ಹಾಗೂ ದರ್ಗಾಕ್ಕೇ ಸ್ಥಳ ವಕ್ಫ್ ಮಾಡಿದವರಲ್ಲೊಬ್ಬರದ ಟಿ ಎಂ ಬಾಬ ಹಾಜಿ ತೆಕ್ಕಿಲ್ , ಕೆ ಕೆ ಶಾಹುಲ್ ಹಮೀದ್,ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಕರಾವಳಿ, ಟಿ ಎಂ ರಝಾಕ್ ಹಾಜಿ, ಎ ಎ ಅಬ್ದುಲ್ ರಝಾಕ್ ಹಾಜಿ ಅಡಿಮರಡ್ಕ, ನೂರುದ್ದೀನ್ ಅನ್ಸಾರಿ, ಸಾಜಿದ್ ಅಝಹರಿ, ಅಬ್ದುಲ್ ಖಾದರ್ ಮೊಟ್ಟೆಂಗಾರ್ ಮೊದಲಾದವರು ಉಪಸ್ಥಿತರಿದ್ದರು. ರಿಯಾಝ್ ಫೈಝಿ ಎಮ್ಮೆಮಾಡು ದುವಾ ನೆರವೇರಿಸಿದರು.

IMG 20220529 WA0020 300x169

IMG 20220529 WA0021 300x224

Related Articles