ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ವತಿಯಿಂದ ಕೋವಿಡ್ ಸಂಕಷ್ಟ ಕಾಲದಲ್ಲಿ ರೂ 13.5 ಲಕ್ಷ ಧನಸಹಾಯ…
ಸುಳ್ಯ: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು ಇದರ ಸ್ಥಾಪಕಾಧ್ಯಕ್ಷ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿಯವರಾದ ಟಿ.ಎಂ.ಶಹೀದ್ ತೆಕ್ಕಿಲ್ ರವರ 50 ನೇ ಹುಟ್ಟು ಹಬ್ಬದ ಪ್ರಯುಕ್ತ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ನಾಲ್ಕು ಜನ ರೋಗಿಗಳಿಗೆ,ನಾಲ್ಕು ಮಹಿಳೆಯರ ಮನೆ ದುರಸ್ತಿಗೆ, ಒಬ್ಬ ಬಡ ಹೆಣ್ಣು ಮಗಳ ಮದುವೆಗೆ ಹಾಗೂ ಕೊರೋನಾ ವಿರುದ್ಧ ಹೋರಾಡಲು ಅರಂತೋಡು ಮತ್ತು ಸಂಪಾಜೆ ಗ್ರಾಮ ಪಂಚಾಯತ್ ಗೆ ಮತ್ತು ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೊಳಗಾದ 62 ಜನರಿಗೆ ಧನ ಸಹಾಯ ನೀಡಲಾಗಿದೆ.
ಒಟ್ಟು 71 ಜನರಿಗೆ ರೂ 8 ಲಕ್ಷ 20 ಸಾವಿರದಷ್ಟು ಧನ ಸಹಾಯ ನೀಡಲಾಗಿದೆ. ತೆಕ್ಕಿಲ್ ಗ್ರಾಮಿಣಾಭಿವೃದ್ಧಿ ಪ್ರತಿಷ್ಠಾನ ( ರಿ ) ಆರಂತೋಡು ಮತ್ತು ಅಭಿಮಾನಿಗಳ ಸಹಾಯದಿಂದ ಗೂನಡ್ಕದ ದರ್ಖಾಸ್ತುವಿನಲ್ಲಿ ಒಂದು ಬಡ ಕುಟುಂಬಕ್ಕೆ ಸುಮಾರು 5.5 ಲಕ್ಷ ವೆಚ್ಚದಲ್ಲಿ ಮನೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಟಿ.ಎಂ.ಶಹೀದ್ ತೆಕ್ಕಿಲ್ ರವರ 50 ನೇ ಹುಟ್ಟುಹಬ್ಬದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಸದಾನಂದ ಮಾವಾಜಿ ಮತ್ತು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು ಇದರ ಕಾರ್ಯದರ್ಶಿ ಅಶ್ರಫ್ ಗುಂಡಿ ತಿಳಿಸಿದ್ದಾರೆ.