ಯೆನೆಪೋಯ ಇಂಜಿನಿಯರಿಂಗ್ ಕಾಲೇಜು – 98% ಫಲಿತಾಂಶ…

ಮೂಡಬಿದ್ರಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಅಂತಿಮ ವರ್ಷದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಿನಲ್ಲಿ ನಡೆಸಿದ ಪರೀಕ್ಷೆಗಳ ಫಲಿತಾಂಶವು ಪ್ರಕಟಗೊಂಡಿದ್ದು ಯೆನೆಪೋಯ ಇಂಜಿನಿಯರಿಂಗ್ ಕಾಲೇಜು 98% ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿದೆ.
ಕಾಲೇಜಿನ ವಿಭಾಗವಾರು ಫಲಿತಾಂಶಗಳ ಪೈಕಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ-100%, ಕಂಪ್ಯೂಟರ್ ಸೈನ್ಸ್-98%, ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗವು 98%, ಇಂಫಾರ್ಮೇಶನ್ ಸೈನ್ಸ್ ವಿಭಾಗವು 100% ಮತ್ತು ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಭಾಗವು 95 % ಫಲಿತಾಂಶವನ್ನು ದಾಖಲಿಸಿವೆ.
ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಯನ್ನು ಪ್ರಾಂಶುಪಾಲ ಡಾ. ಆರ್. ಜಿ. ಡಿಸೋಜಾ ಹಾಗೂ ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್ ಅವರು ಅಭಿನಂದಿಸಿದ್ದಾರೆ.