ದಾವಣಗೆರೆ ಉಪ ಚುನಾವಣೆ- ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ವರದಿ ನೀಡಿದ ಕೆಪಿಸಿಸಿ ವೀಕ್ಷಕ ಟಿ ಎಂ ಶಾಹಿದ್ ತೆಕ್ಕಿಲ್…
ದಾವಣಗೆರೆ: ದಾವಣಗೆರೆ ದಕ್ಷಿಣ ಉಪ ಚುನಾವಣೆಯ ವಾರ್ಡ್ ಎಂಟರ ಸುರೇಶ್ ನಗರ (ಜಾಲಿನಗರ)ದಲ್ಲಿ ಕೆಪಿಸಿಸಿ ಉಸ್ತುವಾರಿಗಳಾದ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರೂ ಮತ್ತು ಪ್ರಧಾನ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಟಿ ಎಂ ಶಾಹಿದ್ ತೆಕ್ಕಿಲ್ ಇವರು 8 ದಿನಗಳ ಕಾಲ ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣ ಪ್ರಚಾರವನ್ನು ವಾರ್ಡ್ ಸಂಖ್ಯೆ- 8 ರಲ್ಲಿ ಸುರೇಶ್ ನಗರದ ಬೂತ್ ಸಂಖ್ಯೆ 56, 57, 58, 59, 60, 61, 62, 63 ರಲ್ಲಿ ಕುಣಿಗಲ್ ಶಾಸಕರು ಶ್ರೀ ಹೆಚ್.ಡಿ ರಂಗನಾಥ್ ಜೊತೆಯಲ್ಲಿ ನಡೆಸಿ ಒಟ್ಟು ಮತದಾನ ವಿವರ, ಪಕ್ಷಕ್ಕೆ ಬೀಳಬಹುದಾದ ಮತ, ಬಿಜೆಪಿ ಮತ್ತು ಎಸ್ ಡಿ ಪಿ ಐ ಮತ್ತು ಪಕ್ಷೇತರ ಪಡೆಯಬಹುದಾದ ಮತ ಮತ್ತು ಪಕ್ಷದ ಪರವಾಗಿ ಕೆಲಸ ಮಾಡಿದ ನಾಯಕರುಗಳ ವಿವರ ಸಹಿತ ಚುನಾವಣೆ ಬಗ್ಗೆ ಸಮಗ್ರ ವರದಿಯನ್ನು ಕೆಪಿಸಿಸಿ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ನೀಡಿದರು.






