ಗುರುವಾರ -ದ.ಕ 90 ,ಉಡುಪಿ 14 ಹಾಗೂ ರಾಜ್ಯದಲ್ಲಿ 1502 ಕೊರೊನ ಪಾಸಿಟಿವ್ ಪತ್ತೆ…
ಮಂಗಳೂರು: ಇಂದು(ಗುರುವಾರ) ದ.ಕ ಜಿಲ್ಲೆಯಲ್ಲಿ 90 ,ಉಡುಪಿ ಜಿಲ್ಲೆಯಲ್ಲಿ 14 ಹಾಗೂ ರಾಜ್ಯದಲ್ಲಿ 1502 ಕೊರೊನ ಪಾಸಿಟಿವ್ ಪತ್ತೆಯಾಗಿದೆ.
ದ.ಕ. ಜಿಲ್ಲೆಯ ಸೋಂಕಿತರ ಪೈಕಿ 15 ಮಂದಿ ಕುವೈಟ್, ಸೌದಿ, ದುಬೈಯಿಂದ ಮರಳಿದವರಾಗಿದ್ದಾರೆ. 19 ಮಂದಿಯಲ್ಲಿ ಐಎಲ್ ಐ ಪ್ರಕರಣದ ಮೂಲಕ ಸೋಂಕು ದೃಢಪಟ್ಟಿದೆ. ಎಂಟು ಮಂದಿಯಲ್ಲಿ ಸಾರಿ ಪ್ರಕರಣ ಪತ್ತೆಯಾಗಿದೆ. 17 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದ್ದು, 31 ಮಂದಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. ಉಳ್ಳಾಲ ಸುತ್ತಮುತ್ತಲಿನ ಪ್ರದೇಶದಲ್ಲಿ 2 ವರ್ಷ 3 ವರ್ಷದ ಮಕ್ಕಳು ಸೇರಿ 28 ಮಂದಿಗೆ ಸೋಂಕು ಹರಡಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ ವೈ ಭರತ್ ಶೆಟ್ಟಿ ಸೇರಿದಂತೆ ಜಿಲ್ಲೆಯ ಆರೋಗ್ಯಾಧಿಕಾರಿ ಮತ್ತು ವೆನ್ಲಾಕ್ ಆಸ್ಪತ್ರೆಯ ಲ್ಯಾಬ್ ಸಿಬ್ಬಂದಿಗೆ ಒರ್ವರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಶಾಸಕರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ಸ್ವಯಂ ಪ್ರೇರಿತವಾಗಿ ಕೊರೊನಾ ತಪಾಸಣೆ ನಡೆಸಿದ ಸಂದರ್ಭ ಸೋಂಕು ಪತ್ತೆಯಾಗಿದೆ.ಶಾಸಕರು ಮಂಗಳೂರಿನ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಕಾರಣ ಸೋಂಕು ತಗುಲಿದೆ ಎನ್ನಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಬಂದ ನಾಲ್ವರಲ್ಲಿ, ಕೇರಳದಿಂದ ಮರಳಿದ ಒಬ್ಬರಲ್ಲಿ, ಬೆಂಗಳೂರಿನಿಂದ ಮರಳಿದ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ. ಪ್ರಾಥಮಿಕ ಸಂಪರ್ಕದಿಂದ ಐವರಲ್ಲಿ ಸೋಂಕು ಪತ್ತೆಯಾಗಿದೆ.
ಇನ್ನು ರಾಜ್ಯದಲ್ಲಿ ಇಂದು 1502 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ದಾಖಲುಗೊಂಡಿದೆ. ಇವತ್ತು ಒಂದೇ ದಿನ 19 ಜನ ಸೋಂಕಿತರು ಮೃತಪಟ್ಟಿದ್ದಾರೆ.