ಪುತ್ತೂರು ಬಿಜೆಪಿ ನಗರ ಸಭೆ ಸದಸ್ಯ ನಾಪತ್ತೆ : ಬೈಕ್ ಬಂಟ್ಚಾಳ ನೇತ್ರಾವತಿ ನದಿ ಬದಿ ಪತ್ತೆ…

ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆ ಕೆಳಭಾಗದಲ್ಲಿ ಬೈಕ್ ಮೊಬೈಲ್ ಶರ್ಟ್ ಮತ್ತು ಚಪ್ಪಲಿ ಅನಾಥವಾಗಿದ್ದು ಪುತ್ತೂರು ಮೂಲದ ವ್ಯಕ್ತಿಯದಾಗಿರಬಹುದು ಎಂದು ಹೇಳಲಾಗಿದೆ.
ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಅವರ ಸೊತ್ತುಗಳು ಇದಾಗಿದ್ದು, ಬಳಿಕ ಕಾಣೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ರಮೇಶ್ ರೈ ಅವರು ಇತ್ತೀಚಿಗೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಯ್ಕೆಯಾಗಿದ್ದರು.
ಇಂದು ಬೆಳಿಗ್ಗೆ ಸುಮಾರು 11 ಗಂಟೆಯಿಂದ ಬೈಕ್ ಹಾಗೂ ಸೊತ್ತುಗಳು ಇಲ್ಲಿ ಅನಾಥವಾಗಿ ಕಂಡು ಬಂದಿವೆ ಎಂದು ಸ್ಥಳೀಯರು ಪೋಲೀಸರಿಗೆ ತಿಳಿಸಿದ್ದಾರೆ.
ಸ್ಥಳದಲ್ಲಿ ಸಿಕ್ಕಿದ ಮೊಬೈಲ್ ನಿಂದ ನಂಬರ್ ಪಡೆದು ಕರೆ ಮಾಡಿದಾಗ ಇದು ಪುತ್ತೂರು ರಮೇಶ್ ರೈ ಅವರದು ಎಂದು ತಿಳಿದಿದ್ದು,ಮನೆಯವರಿಗೆ ತಿಳಿಸಲಾಗಿದೆ.
ಸ್ಥಳದಲ್ಲಿ ರಮೇಶ್ ರೈ ಅವರ ಕುಟುಂಬದ ಸದಸ್ಯರು ಪೋಲೀಸರು ಹಾಗೂ ಸ್ಥಳೀಯರು ಜಮಾಯಿಸಿದ್ದು ಸುತ್ತ ಮುತ್ತಲಿನ ಜಾಗದಲ್ಲಿ ಹುಡುಕಲು ಪ್ರಾರಂಭಿಸಿದ್ದಾರೆ.

Related Articles

Back to top button