ನೆಲ್ಲಿಕಟ್ಟೆ ಜಲಸಂರಕ್ಷಣಾ ಯೋಜನೆ ಲೋಕಾರ್ಪಣೆ:ಪ್ರಕೃತಿಗೆ ಹಾನಿ ಮಾಡಿದಲ್ಲಿ ಮಹಾದುರಂತ-ಎ.ಸಿ. ಕೃಷ್ಣಮೂರ್ತಿ….
ಪುತ್ತೂರು: ಪ್ರಕೃತಿ ಸಹಿಸುವಷ್ಟು ಸಹಿಸಿಕೊಳ್ಳುತ್ತದೆ. ಆದರೆ ಮನುಷ್ಯ ಪ್ರಕೃತಿಗೆ ಹಾನಿ ಮಾಡುವುದರಿಂದ ಪ್ರಕೃತಿ ವಿಕೋಪಗೊಂಡು ನೆರೆಗಳಂತಹ ಮಹಾ ದುರಂತವನ್ನು ತಂದೊಡ್ಡುತ್ತದೆ ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ ಹೇಳಿದರು.
ಅವರು ಶುಕ್ರವಾರ ಪುತ್ತೂರು ಶ್ರಿ ರಾಮಕೃಷ್ಣ ಸೇವಾ ಸಮಾಜ ಇದರ ವತಿಯಿಂದ ಆಯೋಜಿಸಿದ ಜಲಸಂರಕ್ಷಣಾ ಯೋಜನೆಯನ್ನು ನೆಲ್ಲಿಕಟ್ಟೆ ಶ್ರಿ ರಾಮಕೃಷ್ಣ ಸೇವಾ ಸಮಾಜದ ವಠಾರದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ನಾವು ಪ್ರಕೃತಿಯನ್ನು ಉಳಿಸಿದರೆ ಅದು ನಮ್ಮನ್ನು ಉಳಿಸುತ್ತದೆ. ಹಿರಿಯರು ಕಿರಿಯರು ಸೇರಿಕೊಂಡು ಸಾಮರಸ್ಯದ ಸಮಾಜವನ್ನು ಕಟ್ಟೋಣ ಎಂದರು.
ಜಲತಜ್ಞರಾದ ಅಡಿಕೆ ಪತ್ರಿಕೆಯ ಸಂಪಾದ ಶ್ರೀ ಪಡ್ರೆ ಮಾತನಾಡಿ ಹೆಚ್ಚು ಮಳೆ ಬೀಳುವ ಜಿಲ್ಲೆಯಲ್ಲಿ ಟ್ಯಾಂಕರ್‍ನಲ್ಲಿ ನೀರು ಸರಬರಾಜು ಮಾಡು ಸ್ಥಿತಿಯಷ್ಟು ಬರಗಾಲ ಬಂದಿದೆ. ಕುಡಿಯುವ ನೀರಿಗಾಗಿ ಅನುದಾನ ಬಿಡುಗಡೆಗೊಳಿಸುವ ಭೀಕರ ಸ್ಥಿತಿ ಎದುಸುತ್ತಿದ್ದೇವೆ. ಆದ್ದರಿಂದ ನಮ್ಮಿಂದ ಸಾದ್ಯವಾದಷ್ಟು ಭೂಮಿಯಲ್ಲಿ ನೀರು ಇಂಗಿಸಿ ಮುಂದಿನ ಪೀಳಿಗೆಗೆ ನೀರಿನ ಸಮಸ್ಯೆಯನ್ನು ತಪ್ಪಿಸುವ ಕೆಲಸವಾಗಬೇಕು ಎಂದರು.
ಪುತ್ತೂರು ಶ್ರೀ ರಾಮಕೃಷ್ಣ ಸೇವಾ ಸಮಾಜದ ಅಧ್ಯಕ್ಷ ಯನ್. ಸುಬ್ರಹ್ಮಣ್ಯ ಕೊಳತ್ತಾಯ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಕಾರ್ಯದರ್ಶಿ ಗುಣಪಾಲ್ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವತ್ಸಲಾ ರಾಜ್ಞಿ ಸ್ವಾಗತಿಸಿದರು. ರಮೇಶ್ ಬಾಬು ವಂದಿಸಿದರು. ಶಿಕ್ಷಕರಾದ ರಂಜಿನಿ ಮತ್ತು ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.