ಗಾಂಧಿನಗರ – ಸೌಹಾರ್ದ ಇಫ್ತಾರ್ ಕೂಟ ಮತ್ತು ಟಿ. ಎಂ. ಶಹೀದ್ ಗೆ ಸನ್ಮಾನ…
ರಂಜಾನ್- ಸತ್ಕಾರ್ಯ ಮತ್ತು ಸಹಾಯ, ಸೌಹಾರ್ದತೆ ಮತ್ತು ಸಹೋದರತೆಗೆ ಅಡಿಪಾಯ ಟಿ. ಎಂ. ಶಹೀದ್...

ಸುಳ್ಯ: ಪವಿತ್ರ ರಂಜಾನ್ ತಿಂಗಳ ಆಶಯವಾದ ದಾನ, ಧರ್ಮ ಮತ್ತು ಬಡವರಿಗೆ ಸಹಾಯ ಮಾಡುವುದು, ಸೌಹಾರ್ದತೆ ಮತ್ತು ಸಹೋದರತೆ ಯಿಂದ ಬದುಕಲು ಪ್ರೇರಣೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಎಂ. ಶಹೀದ್ ಹೇಳಿದರು.
ಗಾಂಧಿನಗರ ಗಾಂಧಿಪಾರ್ಕ್ ಬಳಿ ಫಿಶ್ ಮರ್ಚoಟ್ ಹಮೀದ್ ರವರ ಆತಿಥ್ಯ ದಲ್ಲಿ ಜರಗಿದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಇದೆ ಸಂದರ್ಭದಲ್ಲಿ ಜನಪ್ರತಿನಿದಿಗಳು, ಆಟೋ ಚಾಲಕರು, ಕಾರ್ಮಿಕ ಸಂಘಟನೆ ಯ ಸದಸ್ಯರು ಮತ್ತು ಸಾರ್ವಜನಿಕರ ಪರವಾಗಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಗೊಂಡ ಟಿ. ಎಂ. ಶಾಹಿದ್ ತೆಕ್ಕಿಲ್ ರವರನ್ನು ಸನ್ಮಾನಿಸಲಾಯಿತು.