KCF ಸೊಹಾರ್ ಝೋನ್ ರಬೀಅ್ 25 ವಿಜೃಂಭಣೆಯಿಂದ ಜರುಗಿದ ಮೀಲಾದ್ ಕಾನ್ಫರೆನ್ಸ್…

ಸೊಹಾರ್: ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ (ಸ.ಅ) ರವರ 1500 ನೇ ಜನ್ಮ ದಿನಾಚರಣೆಯ ಭಾಗವಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಸೊಹಾರ್ ಝೋನ್ ಸಮಿತಿ ಅಯೋಜಿಸಿದ ಬೃಹತ್ ಮೀಲಾದ್ ಸಮಾವೇಶ 2025
ಸಪ್ಟೆಂಬರ್ 12 ಶುಕ್ರವಾರ ರಂದು , ಕೆಸಿಎಫ್ ಒಮಾನ್ ಸಂಘಟನಾ ಅಧ್ಯಕ್ಷ ಉಮ್ಮರ್ ಸಖಾಫಿ ಎಡಪ್ಪಾಲ ಇವರ ದುಅ ದೊಂದಿಗೆ , KCF ಸೊಹಾರ್ ಝೋನ್ ಅಧ್ಯಕ್ಷರಾದ ಫಾರೂಕ್ ಕುಕ್ಕಾಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
“ಪ್ರವಾದಿ (ﷺ) ಕಾಲಾತೀತ ಮಾರ್ಗದರ್ಶಿ ”* ಎಂಬ ಧ್ಯೇಯ ವಾಕ್ಯದೊಂದಿಗೆ ರೊಯಲ್ ಗಾರ್ಡನ್ ಹೊಟೆಲ್ ನಲ್ಲಿ ವಿಜೃಂಭಣೆಯಿಂದ ನಡೆದ ಮೀಲಾದ್ ಸಮಾವೇಶ ದಲ್ಲಿ ಉದ್ಘಾಟಕರಾಗಿ ಇಕ್ಬಾಲ್ ಹಾಜಿ ಬರ್ಕ (ಪ್ರಧಾನ ಕಾರ್ಯದರ್ಶಿ, KCF ಅಂತರಾಷ್ಟ್ರೀಯ ಸಮಿತಿ)ಮತ್ತು
ಬಹು ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರು ಹುಬ್ಬುರ್ರಸೂಲ್ (ಸ.ಅ) ಪ್ರಭಾಷಣ ಹಾಗೂ ಮದೀನಾದ ಮದ್ಹ್ ಗೀತೆಗಳ ಮೂಲಕ ಗುರಿತಿಸಿಕೊಂಡಿರುವ ಶಿಹಾನ್ ಮಂಗಳೂರು ರವರು ನಅತೇ ಶರೀಫ್ ಆಲಾಪನೆ ಗೈದರೆ, ಇಕ್ಬಾಲ್ ಮದನಿ,ಅದನಿ ಉಸ್ತಾದ್ ,ಅಲಿ ಇಮಾಮಿ ಇವರ ನೇತೃತ್ವದಲ್ಲಿ ಬುರ್ದಾ, ಮೌಲಿದ್ ಮಜ್ಲಿಸ್ ನಡೆಯಿತು ಹಾಗೂ ನೂರುಲ್ ಇಸ್ಲಾಂ ಮದರಸ ವಿದ್ಯಾರ್ಥಿ ಗಳಿಂದ ದಫ್ ಪ್ರದರ್ಶನ ನಡೆಸಿ ಕೊಟ್ಟರು. ಮುಖ್ಯ ಅತಿಥಿಗಳಾಗಿ ಹಂಝ ಹಾಜಿ ಕನ್ನಂಗಾರ್,(ಅಧ್ಯಕ್ಷರು,KCF ಒಮಾನ್) ಜನಾಬ್ ಅಯ್ಯೂಬ್ ಕೋಡಿ ( ಅಧ್ಯಕ್ಷರು,ಇಹ್ಸಾನ್ ಕರ್ನಾಟಕ KCF ಅಂತರಾಷ್ಟ್ರೀಯ ಸಮಿತಿ) ಇವರು ಭಾಗವಹಿ ಸಂದರ್ಭೋಚಿತ ವಾಗಿ ಮಾತನಾಡಿದರು.
ಹಾಗೂ ಕೆಸಿಎಫ್ ಐಸಿ ನೇತರಾದ ಇಬ್ರಾಹಿಮ್ ಹಾಜಿ ಅತ್ರಾಡಿ, ಜನಾಬ್ ಆರಿಫ್ ಕೋಡಿ,
ಕೆಸಿಎಫ್ ಒಮಾನ್ ಪ್ರದಾನ ಕಾರ್ಯದರ್ಶಿ ಸಂಶುದ್ದೀನ್ ಪಾಲ್ತಡ್ಕ, ಕೋಶಾಧಿಕಾರಿ ಕಲಂದರ್ ಬಾಷ, ಕೆಸಿಎಫ್ ಸೊಹಾರ್ ಝೋನ್ ದಾನಿಗಳಾದ ರಫೀಖ್ ಚೆನ್ನೈ, ಹಸನ್ ಬಾವ ಬಜ್ಪೆ, ಅಶ್ರಫ್ ವಾಮಂಜೂರು ಹಾಗೂ ICF ನಾಯಕಾದ ಅಬ್ದುಲ್ ರಹಮಾನ್ ಮಾಸ್ಟರ್, ಅಬ್ದುಲ್ ರಝಾಕ್ ಝೈನಿ ಉಸ್ತಾದ್, ಅಯ್ಯೂಬ್ ಸಖಾಫಿ, RSC ಒಮಾನ್ ಪ್ರದಾನ ಕಾರ್ಯದರ್ಶಿ ಅರ್ಷದ್ ಮುಕೊಲಿ
KCF ಸೊಹಾರ್ ಮೀಲಾದ್ ಸ್ವಾಗತ ಸಮಿತಿ ಚಯರ್ಮೆನ್ ಸಿದ್ದೀಕ್ ಮಾಂಬ್ಲಿ ಸುಳ್ಯ, ಫೈನಾನ್ಸ್ ಕಂಟ್ರೋಲರ್ ಇಕ್ಬಾಲ್ ಎರ್ಮಾಳ್, ಕನ್ವೀನರ್ ಅಶ್ರಫ್ ಕುತ್ತಾರ್, ವೈಸ್ ಚೇರ್ಮನ್ ಅಬ್ದುಲ್ ಮಜೀದ್ ಕರೋಪಾಡಿ ಹಾಗೂ ಪ್ರಮುಖ ಉಲಮಾ, ಉಮಾರಾ ನೇತಾರು,ಐಸಿಎಫ್, ಕೆಸಿಎಫ್ ಒಮಾನ್ ರಾಷ್ಟ್ರೀಯ, ಝೋನ್ ನಾಯಕರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. ಹಾಗೂ ಪ್ರಬಂಧ ಸ್ಪರ್ಧೆ, ಒಡಕಾಸ್ಟ್ ಸ್ಪರ್ಧೆಯಲ್ಲಿ ವಿಜೇತ ರಿಗೆ ಬಹುಮಾನ ವಿತರಿಸಲಾಯಿತು. ಕೆಸಿಎಫ್ ಸೊಹಾರ್ ಝೋನ್ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ರಕ್ತದಾನ ಶಿಬಿರದಲ್ಲಿ ಅತ್ಯಧಿಕ ಬಾರಿ ರಕ್ತದಾನ ಮಾಡಿದ ಅಝೀಝ್ ಬೇಕೂರು ಇವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಸಭೆಯ ಆರಂಭದಲ್ಲಿ ಅಯ್ಮನ್ ಕುಕ್ಕಾಜೆ ಕಿರಾಅತ್ ಪಠಿಸಿ ಕೆಸಿಎಫ್ ಸೊಹಾರ್ ಕೋಶಾಧಿಕಾರಿ ಡಾ.ಅಬ್ದುಲ್ ರಝಾಕ್ ಹಾಜಿ ಸ್ವಾಗತಿಸಿದರೆ,ಪ್ರಧಾನ ಕಾರ್ಯದರ್ಶಿ ಮುಬೀನ್ ಜೋಕಟ್ಟೆ ವಂದಿಸಿ, ಕಲಂದರ್ ಬಾವ ಪರಪ್ಪು , ಫೈಝಲ್ ಬಾಯರ್ ಕಾರ್ಯಕ್ರಮ ನಿರೂಪಿಸಿದರು.