ಸುಳ್ಯ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಸೂಡ ಅಧ್ಯಕ್ಷರಿಗೆ ಮನವಿ…

ಸುಳ್ಯ: ಸುಳ್ಯ ನಗರ ಮಾಸ್ಟರ್ ಪ್ಲಾನ್ ( ಮಹಾ ಯೋಜನೆ ) ಅನುಷ್ಠಾನ ಸಂದರ್ಭದಲ್ಲಿ ಅಳವಡಿಸಬೇಕಾದ ಅಂಶಗಳು, ಮತ್ತು ತಾಂತ್ರಿಕ ಸಲಹೆಗಳ ಮನವಿಯನ್ನು ಸೂಡ ಅಧ್ಯಕ್ಷರಿಗೆ ಸುಳ್ಯ ಇಂಜಿನಿಯರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಸಲ್ಲಿಸಿದರು.
ಸುಳ್ಯ ನಗರ ಮಾಸ್ಟರ್ ಪ್ಲಾನ್ ಮಹಾಯೋಜನೆಯನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ಜನರಿಗೆ ಸುಲಭವಾಗಿ ಕನ್ವರ್ಷನ್, ಏಕ ನಿವೇಶನ ವಿನ್ಯಾಸ, ಕಟ್ಟಡ ಪರವಾನಿಗೆ ಸಿಗುವ ರೀತಿಯಲ್ಲಿ ನಿಯಮಗಳನ್ನು ಸರಳೀಕರಣ ಗೊಳಿಸುವಂತೆ ಮತ್ತು ಹಾಲಿ ಇರುವ ಬೆಳವಣಿಗೆಗಳ ಅಭಿವೃದ್ಧಿ ಸಂದರ್ಭದಲ್ಲಿ ಕಟ್ಟಡ ಹೊಂದಿರುವ ಸೈಟ್ ಗಳಿಗೆ ತಾಂತ್ರಿಕ ಅನುಮೋದನೆ ನೀಡುವ ಸಂದರ್ಭದಲ್ಲಿ ಟುಬಿ ಡೆಮೋಲಿಶ್ ಅಂಶವನ್ನು ಕೈ ಬಿಡಬೇಕು, ರಸ್ತೆ ಗಳ ಆಗಲೀಕರಣ ವಿಸ್ತೀರ್ಣ ವನ್ನು ಏರಿಯಾ ವೈಸ್ ಅನುಕೂಲವಾಗುವಂತೆ ನಿಗದಿಪಡಿಸಬೇಕು ಮೊದಲಾದ ಅಂಶಗಳನ್ನು ಒಳಗೊಂಡ ಮನವಿಯನ್ನು ಸುಳ್ಯ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫಾ ರವರಿಗೆ ಸುಳ್ಯ ಇಂಜಿನಿಯ ರ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ಯಾಮ್ ಇಂಜಿನಿಯರ್ ನೀಡಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಪ್ರಸಾದ್ ಇಂಜಿನಿಯರ್, ಗಿರೀಶ್ ನಾರ್ಕೋಡ್, ಸುಮಿತ್ರ ಇಂಜಿನಿಯರ್, ಸೂಡ ಟೌನ್ ಪ್ಲಾನರ್ ಮಹಮ್ಮದ್ ಫೈರೋಜ್ ಮೊದಲಾದವರು ಉಪಸ್ಥಿತರಿದ್ದರು.