ಕ್ಯಾಂಪ್ಕೋ ಚಾಕಲೇಟ್‌ ಫ್ಯಾಕ್ಟರಿ ಯೂನಿಯನ್‌ನಿಂದ ಕಾರ್ಮಿಕರ ದಿನಾಚರಣೆ – ಸನ್ಮಾನ…

ಪುತ್ತೂರು: ಕ್ಯಾಂಪ್ಕೋ ಚಾಕಲೇಟ್‌ ಫ್ಯಾಕ್ಟರಿ ಯೂನಿಯನ್‌ವತಿಯಿಂದ ಕಾರ್ಮಿಕರ ದಿನಾಚರಣೆಯು ಮೇ.1ರಂದುಕ್ಯಾಂಪ್ಕೋ ವಸತಿಗೃಹದ ಸಭಾಭವನದಲ್ಲಿ ನಡೆಯಿತು.
ಕ್ಯಾಂಪ್ಕೋ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಮಹೇಶ್‌ ಚೌಟ ಅವರು ಮಾತನಾಡಿ ಕ್ಯಾಂಪ್ಕೋ ಸಂಸ್ಥೆಯ ಸ್ಥಾಪನೆಯು ಕೃಷಿಕರ ಸಹಕಾರದಿಂದ ಆರಂಭಗೊಂಡು ಕೃಷಿಕರಿಗೆ ಕ್ಯಾಂಪ್ಕೋದಿಂದ ಆಗಿರುವ ಪ್ರಯೋಜವನ್ನು
ತಿಳಿಸಿದರು.
ಸನ್ಮಾನ:
ಕ್ಯಾಂಪ್ಕೋ ಸಂಸ್ಥೆಯಿಂದ ಕಳೆದ ಸಾಲಿನಲ್ಲಿ ನಿವೃತ್ತಿಯಾದ ನಾರಾಯಣ ನಾಯ್ಕ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದ ಯೂನಿಯನ್‌ ಆಡಳಿತ ಮಂಡಳಿಯ ನಿರ್ದೇಶಕ ಕಿರಣ್‌ ಕುಮಾರ್‌ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಕಾರ್ಮಿಕರ ದಿನಾಚರಣೆಯ ಕುರಿತು ಕ್ಯಾಂಪ್ಕೋ ಅಧ್ಯಕ್ಷರು, ನಿರ್ದೇಶಕರು, ಕಾನೂನು ಸಲಹೆಗಾರರು ಶುಭ ಹಾರೈಸಿ ಕಳುಹಿಸಿದ ಸಂದೇಶವನ್ನು ಸಭೆಯಲ್ಲಿ ತಿಳಿಸಲಾಯಿತು.
ಯೂನಿಯನ್‌ ನ ಅಧ್ಯಕ್ಷ ಸಂತೋಷ್‌ ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅನನ್ಯ ಪ್ರಾರ್ಥಿಸಿದರು. ಕ್ಯಾಂಪ್ಕೋ ಚಾಕಲೇಟ್‌ ಫ್ಯಾಕ್ಟರಿ ಯೂನಿಯನ್‌ ಕಾರ್ಯದರ್ಶಿ ಪ್ರಕಾಶ್‌ ಸ್ವಾಗತಿಸಿದರು. ಯೂನಿಯನ್‌ ಖಜಾಂಚಿ ಬಾಲಕೃಷ್ಣ ಐ ಆರ್‌ ವಂದಿಸಿದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಸಾತ್ವಿಕ್‌ ಪ್ರಭು ಅವರಿಂದ ಕೊಳಲು ವಾದನ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

whatsapp image 2024 05 02 at 8.43.36 pm (1)

whatsapp image 2024 05 02 at 8.43.36 pm (2)

whatsapp image 2024 05 02 at 8.43.37 pm

Sponsors

Related Articles

Back to top button