ನೆಲ್ಲೂರು ಕೆಮ್ರಾಜೆ – ಕೆರೆಗೆ ಬಿದ್ದು ತಾಯಿ, ಮಗು ಮೃತ್ಯು…

ಸುಳ್ಯ: ಕೆರೆಗೆ ಕಾಲು ಜಾರಿ ಬಿದ್ದ ಮಗುವನ್ನು ರಕ್ಷಿಸಲು ಕೆರೆಗೆ ಹಾರಿದ ತಾಯಿಯೂ ಸೇರಿದಂತೆ ಇಬ್ಬರೂ ಮುಳುಗಿ ಬಲಿಯಾದ ಘಟನೆ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಾಪಲಕಜೆಯ ಜನಾರ್ಧನ ನಾಯಕ್ ಅವರ ಮಗಳು ಸ೦ಗೀತಾ ಮತ್ತು ಆಕೆಯ ಮಗು ಮೃತ ದುರ್ದೈವಿಗಳು.
ತೋಟದಲ್ಲಿನ ಕೆರೆಗೆ ಮಗು ಕಾಲು ಜಾರಿ ಬಿದ್ದಾಗ ಮಗುವನ್ನು ರಕ್ಷಿಸಲು ಸಂಗೀತಾ ಅವರು ಕೆರೆಗೆ ಹಾರಿದ್ದಾರೆ. ಆದರೆ ಈಜು ಗೊತ್ತಿಲ್ಲದ ಅವರು ಮಗುವನ್ನು ರಕ್ಷಿಸಲೂ ಆಗದೆ ಇತ್ತ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲಾಗದೇ ಮೃತಪಟ್ಟಿದ್ದಾರೆ. ಸ೦ಗಿತಾ ಅವರ ಮೃತದೇಹ ಮೇಲೆತ್ತಲಾಗಿದ್ದು, ಮಗುವಿನ ಮೃತದೇಹವನ್ನು ತೆಗೆಯುವ ಪ್ರಯತ್ನ ನಡೆಯುತ್ತಿದೆ.

Related Articles

Back to top button